ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಶ್ವರಪ್ಪ ಅವರ ರಾಜಕೀಯ ತೀರ್ಮಾನಗಳಿಂದ ಅಮಿತ್ ಶಾ #Amith Shah ಅವರ ಮನಸಿಗೆ ನೋವಾಗಿರಬಹುದು. ಹೀಗಾಗಿ ಈಶ್ವರಪ್ಪ #Eshwarappa ಅವರನ್ನು ಭೇಟಿಯಾಗದೆ ವಾಪಸ್ ಕಳುಹಿಸಿರಬಹುದು ಎಂದು ಸಂಸದ ರಾಘವೇಂದ್ರ #MP Raghavendra ಅಭಿಪ್ರಾಯಪಟ್ಟಿದ್ದಾರೆ.
ಅಮಿತ್ ಶಾ ಭೇಟಿಯಾಗಲು ತೆರಳಿದ್ದ ಕೆ.ಎಸ್. ಈಶ್ವರಪ್ಪ ಅವರ ಅಪೂರ್ಣ ದೆಹಲಿ ಪ್ರವಾಸದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು, ಈಶ್ವರಪ್ಪರನ್ನು ಬರಲು ಹೇಳಿ ವಾಪಸ್ ಕಳುಹಿಸಿರುವುದು ನೋಡಿದರೆ ಅಮಿತ್ ಶಾ ಮನಸಿಗೂ ನೋವಾಗಿದೆ ಅನ್ನಿಸುತ್ತದೆ. ಅಮಿತ್ ಶಾ ಫೋನ್ ಮೂಲಕ ಮಾತನಾಡಿದ್ದಾರೆ ಎಂದು ಈಶ್ವರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದು. ಜೊತೆಗೆ ಕಂಡಿಷನ್ ಹಾಕಿ ಹೋಗಿದ್ದು ಅವರ ಮನಸಿಗೆ ನೋವಾಗಿರುವ ಸಾಧ್ಯತೆ ಇದೆ. ಹೀಗಾಗಿ ಅವರು ಈಶ್ವರಪ್ಪರನ್ನು ಭೇಟಿಯಾಗಿಲ್ಲ ಎಂದು ಅನ್ನಿಸುತ್ತದೆ ಎಂದು ತಿಳಿಸಿದರು.
ಅಮಿತ್ ಶಾ ನೇತತ್ವದಲ್ಲಿ ರಾಷ್ಟ್ರೀಯತೆ ದೃಷ್ಠಿಯಿಂದ ತೆಗೆದುಕೊಂಡ ನಿಲುವುಗಳು, ಪಕ್ಷದ ಚೌಕಟ್ಟಿನಲ್ಲಿ ತೆಗೆದುಕೊಂಡ ನಿಲುವುಗಳು ಎಲ್ಲವೂ ಸ್ಪಷ್ಟವಾಗಿವೆ. ಅಂತವರು ನಮ್ಮ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರನ್ನು ಕರೆಸಿಕೊಂಡಿದ್ದಾರೆ ಎಂಬುದೇ ಸಮಾಧಾನ ತಂದಿತ್ತು ಎಂದರು.
Also read: ಡಾ. ಬಾಬು ಜಗಜೀವನ್‌ರಾಮ್ ಆಧುನಿಕ ಭಾರತದ ಕರ್ತೃ: ಮಂಜುನಾಥ್ ಅಭಿಪ್ರಾಯ
ಜಿಲ್ಲೆಯಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಇದೆ. ಬೈಂದೂರಿನಲ್ಲಿ ಕಾರ್ಯಕರ್ತರು ಈ ಬಾರಿ ಬಿಜೆಪಿಗೆ ಹೆಚ್ಚಿನ ಮತಗಳ ಲೀಡ್ ಕೊಡುತ್ತೇವೆ ಎಂದು ಅಲ್ಲಿನ ಜನರೇ ಹೇಳುತ್ತಿದ್ದಾರೆ. ಪ್ರಧಾನಿಮಂತ್ರಿಗಳು ಬೈಂದೂರಿಗೆ ಬಂದು ಹೋಗಬೇಕು ಎಂದು ಅಲ್ಲಿನ ಜನ ಅಪೇಕ್ಷೆ ಇದೆ. ಹೀಗಾಗಿ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post