ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ರಿವರ್ ಮೊಬಿಲಿಟಿಯು Electric scooter River Mobility ಶಿವಮೊಗ್ಗದಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. ಈ ರಿವರ್ ಸ್ಟೋರ್ ಅನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸ ಮಳಿಗೆಯು ಗ್ರಾಹಕರಿಗೆ ಪರೀಕ್ಷಾ ಸವಾರಿಗಳು, ಮಾರಾಟ, ಪರಿಕರಗಳು ಮತ್ತು ಸೇವಾ ಬೆಂಬಲವನ್ನು ಒಳಗೊಂಡ ಸಂಪೂರ್ಣ ಮಾಲೀಕತ್ವದ ಅನುಭವ ನೀಡುತ್ತದೆ. ಈಗಾಗಲೇ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಮತ್ತು ತುಮಕೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ 14 ಮಳಿಗೆಗಳನ್ನು ನಿರ್ವಹಿಸುತ್ತಿದ್ದು, ಶಿವಮೊಗ್ಗದಲ್ಲಿ ನೂತನ ಮಳಿಗೆಯ ಉದ್ಘಾಟನೆಯೊಂದಿಗೆ, ರಿವರ್, ಕರ್ನಾಟಕದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದೆ ಎಂದರು.
ಶಿವಮೊಗ್ಗದಲ್ಲಿ ರಿವರ್ ಶಾಖೆ ತೆರೆಯಲು ಮತ್ತು ಗ್ರಾಹಕರಿಗೆ ವಿದ್ಯುತ್ ಚಲನಶೀಲತೆಯ ಅನುಭವ ನೀಡಲು ಹೆಮ್ಮೆಯಿದೆ. ಇಂಡೀ ಮತ್ತು ರಿವರ್ನ ಗ್ರಾಹಕರೇ-ಮೊದಲು ಎನ್ನುವ ತತ್ವದೊಂದಿಗೆ ನಗರದಲ್ಲಿ ಬಲವಾದ ಆಕರ್ಷಣೆ ಉಂಟುಮಾಡುವ ವಿಶ್ವಾಸ ನಮಗಿದೆ” ಎಂದು ಎಂಎಜಿ ಎಂಟರ್ ಪ್ರೈಸಸ್‍ನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಗೌಸ್ ಪೀರ್ ಪಾಲುದಾರಿಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್ ಇದ್ದರು.
ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿ ಅರವಿಂದ್ ಮೋಟಾರ್ಸ್ ಎದುರು ಕರ್ನಾಟಕ-577201ರಲ್ಲಿರುವ ಎಂಬಲ್ಲಿ ರಿವರ್ ಸ್ಟೋರ್ ಮಳಿಗೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Comments 2