ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಈಶ್ವರಪ್ಪನವರನ್ನು ಎಂದಿಗೂ ಕೈಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಹುದ್ದೆ ಲಭಿಸಲಿದೆ. ಅವರು ಕೂಡ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಕಾಶಿ ಪೀಠದ ಶ್ರೀಗಳು ಹೇಳಿದರು.
ಅವರು ಇಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನಿವಾಸದಲ್ಲಿ ಆಯೋಜಿಸಿದ್ದ 75ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವದಿಸಿ ಮಾತನಾಡಿದರು.

ಕೆ.ಎಸ್. ಈಶ್ವರಪ್ಪ ಮಾತನಾಡಿ, ಜನ್ಮಜನ್ಮಾಂತರದ ಭಾಗ್ಯ ನನ್ನದಾಗಿದೆ. ವಿಶ್ವಕ್ಕೆ ಶ್ರದ್ಧಾಕೇಂದ್ರ ಕಾಶಿಯಾಗಿದ್ದು, ಆ ಶ್ರೀಗಳ ಆಶೀರ್ವಾದ ಸಿಕ್ಕಿರುವುದು ನನ್ನ ಯೋಗಾಯೋಗವಾಗಿದೆ. ಶ್ರೀಗಳೇ ನನಗೆ ಆಶೀರ್ವದಿಸಲು ಬಂದಿರುವುದ ನನ್ನ ಭಾಗ್ಯ. ಬಹಳ ದಿನಗಳ ಆಸೆ ಈಡೇರಿದಂತಾಗಿದೆ. ಕುಟುಂಬದ ಎಲ್ಲಾ ಸದಸ್ಯರು ಕಾಶಿ ಪ್ರವಾಸ ಮಾಡಿದ್ದೆವು ಎಂದು ನೆನಪಿನ ಬುತ್ತಿಯನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಯಲಕ್ಷ್ಮಿ ಈಶ್ವರಪ್ಪ, ಕೆ.ಈ.ಕಾಂತೇಶ್, ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಇ. ವಿಶ್ವಾಸ್, ಎನ್.ಜೆ. ರಾಜಶೇಖರ್, ರುದ್ರಯ್ಯ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post