ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಆನ್‌ಲೈನ್‌ನಲ್ಲಿ ಬಟ್ಟೆ ತರಿಸಿಕೊಡುವ ಕಂಪನಿಗೆ ಹಣ ವಿನಿಯೋಗಿಸಿ ಮೋಸಹೋಗಿರುವ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ:
ಭದ್ರಾವತಿ ತಾಲೂಕಿನ ಅಗರದಳ್ಳಿ ನಿವಾಸಿ ಕುಸುಮ (21) ಈ ಬಗ್ಗೆ ದೂರು ದಾಖಲಿಸಿದ್ದು, ಇವರು ಸೋಮಿನಕೊಪ್ಪದಲ್ಲಿ ಡಿಬಿಎ ಕಂಪನಿ ಎಂಬ ಆನ್‌ಲೈನ್ ಬಟ್ಟೆ ಶಾಪ್‌ಗೆ 45500ರೂ. ಹಣ ವಿನಿಯೋಗಿಸಿದ್ದರು. ಇದಕ್ಕೆ ಕಂಪನಿಯ ಬ್ರಾಂಡೆಡ್ ಬಟ್ಟೆ ಸಹ ನೀಡಲಾಗಿತ್ತು. ಆದರೆ ಕಾರಣಾಂತರದಿಂದ ಬಟ್ಟೆ ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಕಂಪನಿ ಮುಚ್ಚುವ ಹಂತದಲ್ಲಿದ್ದ ಕಾರಣ ಕುಸುಮ ಅವರು ಬಟ್ಟೆ ಅಥವಾ ಹಣ ನೀಡಿ ಎಂದು ಕೇಳಿದ್ದಾರೆ.
ಆದರೆ ಡಿಬಿಎ ಕಂಪನಿಯ ಮ್ಯಾನೇಜರ್ ದುರ್ಗಪ್ಪ ಮತ್ತು ಕಿರಣ್ ಕಂಪನಿಯನ್ನು ಕಳೆದ ಒಂದು ವಾರದಿಂದ ಬಂದ್ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಯುವತಿ ವಿನೋಬನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post