ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಂಡಿ, ಕೀಲು ಹಾಗೂ ಸೊಂಟ ನೋವಿನಿಂದ ಬಳಲುತ್ತಿರುವ ಸಾರ್ವಜನಿಕರ ಅನುಕೂಲಕ್ಕಾಗಿ ಶಿವಮೊಗ್ಗ (Shivamogga) ನಗರದ ಹರಕೆರೆಯಲ್ಲಿರುವ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಆರ್ಥೋ ಕೇರ್ ವಿಭಾಗದಿಂದ ಉಚಿತ ಮೂಳೆ ಸಾಂದ್ರತಾ ಪರೀಕ್ಷೆ (BMD) ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ನವೆಂಬರ್ 16ರ ಸೋಮವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಸ್ಪತ್ರೆಯ ಆವರಣದಲ್ಲಿ ಶಿಬಿರ ನಡೆಯಲಿದೆ. ಮೂಳೆಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಮೂಳೆ ಸವೆತದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ವೈದ್ಯಕೀಯ ಸಲಹೆ ನೀಡುವುದು ಶಿಬಿರದ ಉದ್ದೇಶವಾಗಿದೆ.
Shivamogga: ಉಚಿತ ಪರೀಕ್ಷೆ, ತಜ್ಞ ವೈದ್ಯರಿಂದ ಸಮಾಲೋಚನೆ
ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತ ಮೂಳೆ ಸಾಂದ್ರತಾ ಪರೀಕ್ಷೆ (Free BMD Test) ನಡೆಸಲಾಗುತ್ತದೆ. ಇದರೊಂದಿಗೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಸಮಸ್ಯೆಗಳ ಕುರಿತು ಉಚಿತ ಸಮಾಲೋಚನೆ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ.
ದೀರ್ಘಕಾಲದಿಂದ ಮಂಡಿ ಮತ್ತು ಸೊಂಟ ನೋವಿನಿಂದ ಬಳಲುತ್ತಿರುವವರು, ಮೆಟ್ಟಿಲು ಹತ್ತಲು ಹಾಗೂ ಇಳಿಯಲು ತೊಂದರೆ ಅನುಭವಿಸುತ್ತಿರುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ವಯಸ್ಸಾದಂತೆ ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಮೂಳೆ ಸವೆತ, ಮೂಳೆಗಳ ಕಾರ್ಯಕ್ಷಮತೆ ಕ್ಷೀಣಿಸುವುದು ಹಾಗೂ ಋತುಚಕ್ರ ನಿಂತ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮೂಳೆ ಸಾಂದ್ರತೆ ಕಡಿಮೆಯಾಗುವ ಸಮಸ್ಯೆ ಇರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು.
ಮೊದಲ 100 ಮಂದಿಗೆ ಮಾತ್ರ ಆದ್ಯತೆ
ಶಿಬಿರದಲ್ಲಿ ಮೊದಲು ನೋಂದಾಯಿಸಿಕೊಳ್ಳುವ 100 ಜನರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಮುಂಚಿತವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ಶಿಬಿರದ ಸ್ಥಳ: ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಎನ್ಟಿ ರಸ್ತೆ, ಹರಕೆರೆ, ಶಿವಮೊಗ್ಗ.
ದಿನಾಂಕ: ನವೆಂಬರ್ 16, 2026, ಸೋಮವಾರ.
ಸಮಯ: ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9986759486 ಸಂಖ್ಯೆಯನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ಆರ್ಥೋ ಕೇರ್ ವಿಭಾಗ ತಿಳಿಸಿದೆ.
Also Read>> ಶೌಚಾಲಯವೂ ಇಲ್ಲ, ಕುಡಿಯುವ ನೀರೂ ಇಲ್ಲ; ಐತಿಹಾಸಿಕ ಕೂಡ್ಲಿ ದೇಗುಲ ಬಳಿಯ ಅವ್ಯವಸ್ಥೆಗೆ ಆಕ್ರೋಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









