ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೆಸಿಐ ಶಿವಮೊಗ್ಗ ಭಾವನದಿಂದ ಸರ್ಜಿ ಆಸ್ಪತ್ರೆ ಸಹಯೋಗದಲ್ಲಿ ನಾಳೆ ಫೆ.೬ರ ಭಾನುವಾರ ಮದ್ಯಾಹ್ನ 3ಗಂಟೆಗೆ ಗಾಡಿಕೊಪ್ಪ ಸಮೀಪದ ಸಂಭ್ರಮ ಅಪಾರ್ಟ್‌ಮೆಂಟ್ ಎದುರಿನ ಅನುಪಿನಕಟ್ಟೆ ಲಂಬಾಣಿಹಟ್ಟಿಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಿಬಿರವನ್ನು ವಿಧಾನಪರಿಷತ್ ಶಾಸಕ ಡಿ.ಎಸ್.ಅರುಣ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ. ಸಿಇಒ ಎಂ.ಎಲ್. ವೈಶಾಲಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜೆಸಿಐ ಭಾವನದ ಅಧ್ಯಕ್ಷೆ ಹೆಚ್‌ಜಿಎಫ್ ಶಾರದಾ ಶೇಷಗಿರಿಗೌಡ ವಹಿಸಲಿದ್ದು, ಗೌರವಾನ್ವಿತ ಅತಿಥಿಗಳಾಗಿ ಡಾ.ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಸರ್ವರನ್ನು ಕಾರ್ಯದರ್ಶಿ ಜೆಸಿ ಪೂರ್ಣಿಮಾ ಸುನಿಲ್, ಯೋಜನಾ ನಿರ್ದೇಶಕರಾದ ಜೆಸಿ ರೇಖಾ ರಂಗನಾಥ್, ಜೆಸಿ ಕವಿತಾ ಜೋಯ್ಸ್ ಸ್ವಾಗತಿಸಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















