ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿ ಅವರು “ಒಂದು ನಿಲ್ದಾಣ-ಒಂದು ಉತ್ಪನ್ನ” ಯೋಜನೆಗೆ ದೇಶದಾದ್ಯಂತ ಇಂದು ವರ್ಚುವಲ್ ಮೂಲಕ ಗುಜರಾತ್ ರಾಜಧಾನಿ ಅಹಮದಾಬಾದ್ ನಿಂದ ಚಾಲನೆ ನೀಡಿದ ವಿಶೇಷ ಕಾರ್ಯಕ್ರಮದಲ್ಲಿ ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿ ಉಪಸ್ಥಿತರಿದ್ದು ಸಮಾರಂಭ ಉದ್ಘಾಟಿಸಿ, ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದ ನಮ್ಮ ರಾಜ್ಯದ ಶ್ರೀಮಂತ ಪರಂಪರೆಯಾದ “ಇಳಕಲ್ ಸೀರೆ” Ilkal Saree ವ್ಯಾಪಾರಕ್ಕೆ ಚಾಲನೆ ಕೊಡಲಾಯಿತು.
ಈ ಯೋಜನೆಯ ಪ್ರಮುಖ ಉದ್ದೇಶ ದೇಶೀಯ ಉತ್ಪನ್ನಗಳಿಗೆ, ಸ್ಥಳೀಯ ಉತ್ಪನ್ನಗಳಿಗೆ, ಕರಕುಶಲ ವಸ್ತುಗಳಿಗೆ, ಕೈಮಗ್ಗದ ಉತ್ಪನ್ನಗಳಿಗೆ, ಸಂಸ್ಕರಿಸಿದ/ಅರೆಸಂಸ್ಕರಿಸಿದ ಆಹಾರಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಪೆÇ್ರೀತ್ಸಾಹ ನೀಡುವುದರ ಜೊತೆಗೆ ಅಳಿವಿನ ಅಂಚಿನಲ್ಲಿರುವ ಈ ವರ್ಗಗಳಿಗೆ ಹೆಚ್ಚುವರಿ ಆದಾಯದ ಅವಕಾಶ ಸೃಷ್ಟಿಸಿ ಕೊಡುವುದರ ಜೊತೆಗೆ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸಲು ಹಾಗೂ ಜಾಗತಿಕ ಮಟ್ಟದ ಸ್ಥಾನಮಾನ ನೀಡಲು ಈ ಐತಿಹಾಸಿಕ ಯೋಜನೆ ಜಾರಿಗೆ ತರಲಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ರುದ್ರೇಗೌಡ ಅವರು, ಅರುಣ್ ಅವರು, ಭಾರತಿ ಶೆಟ್ಟಿ ಅವರು ಹಾಗೂ ಪಕ್ಷದ ಅನೇಕ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.
Also read: ಕೋಟೆ ಮಾರಿಕಾಂಬಾ ಜಾತ್ರೆಗೆ ಎಷ್ಟು ವರ್ಷದ ಇತಿಹಾಸವಿದೆ? ಯಾರ ಮನವಿಯಂತೆ ಪ್ರಾಣಿ ಬಲಿ ನಿಷೇಧವಾಯ್ತು?
ಶಿವಮೊಗ್ಗದ ಗ್ರಾಮ ದೇವತೆಯಾದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವದ ನಿಮಿತ್ತ ನಗರದ ಹೃದಯ ಭಾಗವಾದ ಗಾಂಧಿ ಬಜಾರ್ ನಲ್ಲಿ ಪ್ರತಿಷ್ಠಾಪಿಸಿರುವ ದೇವಿಯ ದರ್ಶನ ಪಡೆದು, ನಾಡಿನಲ್ಲಿ ಎದುರಾಗಿರುವ ಭೀಕರ ಬರಗಾಲ ದೂರ ಮಾಡಿ ಜನರಲ್ಲಿ ಶಾಂತಿ ನೆಮ್ಮದಿ ನೆಲೆಗೊಳ್ಳುವಂತೆ ಆ ತಾಯಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಲಾಯಿತು.
ಈ ಸಮಯದಲ್ಲಿ ವಿಧಾನ ಪರಿಷತ್ ಶಾಸಕಿಯಾದ ಭಾರತಿ ಶೆಟ್ಟಿ ಅವರು, ಪ್ರಮುಖರಾದ ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ವೆಂಕಟೇಶ್ ನಾಯ್ಡು, ಮಾಲತೇಶ್, ಸಂತೋಷ್, ರಾಜು, ಯಶೋಧ ಅವರು ಜೊತೆಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post