ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪೌರಾಣಿಕ ಮತ್ತು ಸುಮಾರು 600 ವರ್ಷಗಳ ಐತಿಹಾಸಿಕ ಪ್ರಸಿದ್ದವಾದ ಶ್ರೀ ಕೋಟೆ ಮಾರಿಕಾಂಬ ಜಾತ್ರೆಯೂ Kote Marikamba Fair ಸರ್ವಧರ್ಮಗಳ ಕೇಂದ್ರವಾಗಿದೆ. ಹಬ್ಬದ ಯಶಸ್ಸಿಗೆ ಶ್ರೀ ಕೋಟೆ ಮಾರಿಕಾಂಬ ಸೇವಾ ಸಮಿತಿಯೂ ಹಗಲಿರುಳು ಶ್ರಮಿಸುತ್ತಿದೆ ಎಂದು ರಾಜ್ಯ ಜೀವ ವೈವಿದ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಹೇಳಿದ್ದಾರೆ.
ಎಸ್.ಕೆ. ಮರಿಯಪ್ಪನವರು ಅಧ್ಯಕ್ಷರಾಗಿ ಇರುವ ಸೇವಾ ಸಮಿತಿಯೂ ಈ ವರ್ಷ ಅತ್ಯಂತ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಿದೆ. ಇಂದು ತವರು ಮನೆಯಲ್ಲಿರುವ ಅಮ್ಮನವರು ನಾಳೆ ಮಾರಿಗದ್ದುಗೆಗೆ ತಲುಪಲಿದ್ದಾರೆ. ದೇವಾಲಯಗಳ ತವರು ಮನೆಯೇ ಕೋಟೆಯಾಗಿದೆ. ಇಲ್ಲಿ ಮಾರಿಕಾಂಬ ದೇವಾಲಯದ ಜೊತೆಗೆ ಆಂಜನೇಯ, ಭೀಮೇಶ್ವರ ಮುಂತಾದ ದೇವಾಲಯಗಳು ಇವೆ. ಇವುಗಳಿಗೆ ಕಲಶ ಪ್ರಯಾವೆಬಂತೆ ಮಾರಿಗದ್ದುಗೆ ಇದ್ದು, 1974ರಲ್ಲಿ ಸೇವಾ ಸಮಿತಿ ರಚನೆಯಾದ ಮೇಲೆ ಭವ್ಯ ದೇವಾಲಯ ತಲೆ ಎತ್ತಿದೆ.
2 ವರ್ಷಕೊಮ್ಮೆ ನಡೆಯುವ ಈ ಜಾತ್ರೆಗೆ ದೇಶ ವಿದೇಶಗಳಲ್ಲಿ ನೆಲೆಸಿರುವ ಶಿವಮೊಗ್ಗದ ಮೂಲ ನಿವಾಸಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಮಾರಿಕಾಂಬೆಯ ಮುಖವೇ ದೈವಿಕ ಕಳೆಯಿಂದ ಕಂಗೊಳಿಸುತ್ತಿದೆ. ಒಂದು ನಿಮಿಷ ನೋಡಿದರೆ ಸಾಕು ಭಕ್ತಾಧಿಗಳು ಕೃತಾರ್ಥರಾಗುತ್ತಾರೆ. ಇಡಿ ಶಿವಮೊಗ್ಗ ನಗರವನ್ನೇ ರಕ್ಷಣೆ ಮಾಡುತ್ತಾಳೆ ಎಂಬ ಪ್ರತಿತಿ ಇದೆ. ಜಾತ್ರಾ ಸಮಯದಲ್ಲಿ ಹಿಂದೂ, ಕ್ರಿಶ್ಚಿಯನ್, ಜೈನ ಅಷ್ಟೇಕೆ ಮುಸ್ಲಿಂ ಬಾಂಧವರು ಕೂಡ ದೇವಿಗೆ ಪೂಜೆ ಸಲ್ಲಿಸುವುದರಿಂದ ಇದು ಸರ್ವಧರ್ಮ ಆರಾಧನೆಯಾಗಿದೆ.
Also read: ಮುಂದಿನ ವಾರ ನಗರಕ್ಕೆ ಪ್ರಧಾನಿ ಮೋದಿ | ಶಿವಮೊಗ್ಗದಿಂದಲೇ ಚುನಾವಣಾ ರಣಕಹಳೆ
ಅನೇಕ ವಿಧಿವಿಧಾನಗಳೊಂದಿಗೆ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಪ್ರಾರಂಭದಲ್ಲಿ ಪ್ರಾಣಿ ಬಲಿ ಕೊಡುವ ಪದ್ದತಿ ಇತ್ತಾದರೂ ಕೂಡ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ ಶೃಂಗೇರಿ ಶ್ರೀಗಳು ಪ್ರಾಣಿ ಬಲಿ ಕೊಡಬೇಡಿ ಎಂದು ಮನವಿ ಮಾಡಿದ ನಂತರ ಮತ್ತು ಕಾನೂನುಗಳು ಬಿಗಿಯಾದ ನಂತರ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ. ಒಟ್ಟಾರೆ ಶಿವಮೊಗ್ಗದ ಶ್ರೀ ಮಾರಿಕಾಂಬ ಜಾತ್ರೆ ಸಾಗರ, ಶಿರಸಿ ಹೀಗೆ ಎಲ್ಲಾ ಬಹುದೊಡ್ಡ ಜಾತ್ರೆಗಳ ಪಟ್ಟಿಗೆ ಸೇರುತ್ತದೆ. ಇಂತಹ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಈ 5 ದಿನಗಳ ಕಾಲ ನಡೆಯುವ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಶೇಷಾದ್ರಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post