ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ ವಿಧಾನಸಭಾ ಕ್ಷೇತ್ರದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಶಾಂತಿ ಪ್ರಿಯರಾಗಿರುವ ಬಿ.ಕೆ. ಸಂಗಮೇಶ್ವರ BKSangameshwar ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಭದ್ರಾವತಿ ಕಾಂಗ್ರೆಸ್ ಮುಖಂಡರು ಹಾಗೂ ರಾಜ್ಯ ಬಂಜಾರ್ ಯುವ ರೈತ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ಅವರು ಶಾಂತಿ ಪ್ರಿಯ ಬಿಕೆ ಸಂಗಮೇಶ್ವರ್ ಗೆ ಸಚಿವ ಸ್ಥಾನ ದೊರಕಿದ್ದೆ ಆದಲ್ಲಿ ಭದ್ರಾವತಿಯಲ್ಲಿ ಉಳಿವಿನ ಹಂಚಿನಲ್ಲಿರುವ ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆಗಳನ್ನು ಪುನರಾರಂಭ ಮಾಡಿಸಿ ಸಾವಿರಾರು ಕಾರ್ಮಿಕರಿಗೆ ಕೆಲಸ ದೊರಕಲಿದೆ ಜೊತೆಗೆ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದರು.
ಇನ್ನು ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಕೂಡ ಈ ಬಾರಿ ಸಂಗಮೇಶ್ವರ ಗೆಲ್ಲಿಸಿಕೊಟ್ಟಿದ್ದೆ ಆದಲ್ಲಿ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ವಚನವನ್ನು ನೀಡಿದ್ದರೂ ಹಾಗಾಗಿ ಈ ಬಾರಿ ಮಂತ್ರಿಮಂಡಲದಲ್ಲಿ ಅವರನ್ನು ಸಚಿವರನ್ನಾಗಿ ಮಾಡುವುದರ ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಅವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಒತ್ತಾಯಿಸಿದರು.
ಇನ್ನು ಸಂಗಮೇಶ ಅವರಿಗೆ 2018ರಲ್ಲಿ ಬಿಜೆಪಿಯಿಂದ ಸಾಕಷ್ಟು ಆಫರ್ ಗಳು ಬಂದಿದ್ದರೂ ಕೂಡ ಅವರು ನಯವಾಗೆ ತಿರಸ್ಕರಿಸಿ ನಾನು ಪಕ್ಷಕ್ಕೆ ನಿಷ್ಠ ಎಂದು ಅವರು ಪಕ್ಷದಲ್ಲಿ ಉಳಿದುಕೊಂಡಿದ್ದರು ಹಾಗಾಗಿ ಅವರ ಮೇಲೆ ನಂಬಿಕೆ ಇಟ್ಟುಕೊಂಡು ಈ ಬಾರಿ ಸಚಿವ ಸ್ಥಾನ ನೀಡಿದೆ ಆದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಭದ್ರಾವತಿ ತಾಲೂಕಿನ ಅಭಿವೃದ್ಧಿಯನ್ನು ಕಾಣಲಿದ್ದೇವೆ ಎಂದರು.
ಒಂದೊಮ್ಮೆ ಈ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದೆ ಹೋದಲ್ಲಿ ಭದ್ರಾವತಿ ನಗರದಲ್ಲಿ ಶಾಂತಿಯುತವಾಗಿ ಯಾವುದೇ ಅಶಾಂತಿಯನ್ನು ಸೃಷ್ಠಿಸದೆ ಕಾಂಗ್ರೆಸ್ ಮುಖಂಡರು ಸೇರಿದಂತೆ ನಗರದ ಎಲ್ಲಾ ಸಂಗಮೇಶ್ವರ ಅಭಿಮಾನಿಗಳು ಶಾಂತಿಯತವಾಗಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣಾನಾಯ್ಕ್, ಕವಿತಾ ಮತ್ತಿರರು ಉಪಸಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post