ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಶಿವಮೊಗ್ಗ ಇಲ್ಲಿ ತೃತೀಯ ಸೆಮಿಸ್ಟರ್ ಡಿಪ್ಲೊಮಾ ತರಗತಿಗಳಿಗೆ 2 ವರ್ಷಗಳ ಐಟಿಐ ಮತ್ತು ದ್ವಿತೀಯ ಪಿಯುಸಿ (ವಿಜ್ಞಾನ ಮತ್ತು ತಾಂತ್ರಿಕ) ಶೇ.35 ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ (ಲ್ಯಾಟರಲ್ ಎಂಟ್ರಿ) ಮೂಲಕ ಪ್ರವೇಶ ಬಯಸುವ ಅಭ್ಯರ್ಥಿಗಳು ಸೆ.1 ರಿಂದ ಸೆ. 20 ರೊಳಗಾಗಿ ನೇರವಾಗಿ ಸಂಸ್ಥೆಗೆ ಭೇಟಿ ನೀಡಿ ಪ್ರವೇಶವನ್ನು ಪಡೆಯಬಹುದಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಾಲಿನಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರವೇಶಾತಿ ನೀಡುತ್ತಿರುವುದರಿಂದ ಈ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕಿದೆ. ಅಭ್ಯರ್ಥಿಗಳು ಐಟಿಐ/ದ್ವಿತೀಯ ಪಿಯುಸಿ ಅಂಕಪಟ್ಟಿ, ಜಾತಿ, ಆಧಾರ್ ಕಾರ್ಡ್, ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಮೀಸಲಾತಿ ಬಯಸುವ ವಿದ್ಯಾರ್ಥಿನಿಯರು ತಮ್ಮ ಮೀಸಲಾತಿಯ ಪೂರಕ ದಾಖಲೆಗಳನ್ನು ನೇರವಾಗಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿರಾಳಕೊಪ್ಪ, ಈ ಸಂಸ್ಥೆಗೆ ಸಲ್ಲಿಸಿ ಪ್ರವೇಶವನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಶಿವಮೊಗ್ಗ , ದೂರವಾಣಿ ಸಂಖ್ಯೆ ಮೊ.ಸಂ: 9886610245, 9686396494ಗಳನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post