ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈಋತ್ಯ ಪದವೀಧರ ಕ್ಷೇತ್ರದಿಂದ #Graduate Constituency election ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಧನಂಜಯ ಸರ್ಜಿ ಅವರು ಮೇ 16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ.ಧನಂಜಯ ಸರ್ಜಿ ಅವರು, ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು, ಉತ್ತಮ ವೈದ್ಯರು ಹಾಗಿದ್ದಾರೆ. ಆರ್.ಎಸ್.ಎಸ್.ನಲ್ಲಿ ಇದ್ದವರು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವರಿಷ್ಠರು ಇವರಿಗೆ ಟಿಕೇಟ್ ನೀಡಿರುವುದು ಸ್ವಾಗತರ್ಹ, ಅವರಿಗೆ ನಮ್ಮ ಕೃತಜ್ಞತೆಗಳು ಅಂದರು.
ಮೇ 16ರಂದು ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಅವರ ಜೊತೆಗೆ ಪಕ್ಷದ ಹಿರಿಯರು ಗಣ್ಯರು ಇರುತ್ತಾರೆ. ಬಿಜೆಪಿಯ ಎಲ್ಲಾ ಮುಖಂಡರು ಅವರ ಗೆಲುವಿಗಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಇನ್ನೂ ಕೇವಲ 18 ದಿನಗಳಲ್ಲಿ ಪ್ರಚಾರ ಮಾಡಬೇಕಾಗಿರುವುದರಿಂದ ಹಲವು ಸಭೆಗಳ ಮೂಲಕ ಮತದಾರರನ್ನು ಒಂದು ಕಡೆ ಸೇರಿಸಿ ಪ್ರಚಾರ ಮಾಡಲಿದ್ದೇವೆ ಎಂದರು.
Also read: ಗುರುದ್ವಾರದಲ್ಲಿ ಸ್ವತಃ ದಾಲ್ ತಯಾರಿಸಿ, ಭಕ್ತರಿಗೆ ಬಡಿಸಿದ ಪ್ರಧಾನಿ ಮೋದಿ
1988ರಿಂದಲೂ ನೈಋತ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಸಂಚಲನವೇ ಮೂಡಿದೆ. ಒಮ್ಮೆ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಸಂದರ್ಭಗಳಲ್ಲಿ ಬಿಜೆಪಿಯೇ ಇಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುತ್ತ ಬಂದಿದೆ. ಈ ಹಿಂದೆ ಗೆದ್ದಿದ್ದ ಬಿಜೆಪಿಯವರೇ ಆಗಿದ್ದ ಆಯನೂರು ಮಂಜುನಾಥ್ ಗೆದಿದ್ದರು. ಬಿಜೆಪಿಯಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ. ಪಕ್ಷ ಯಾರಿಗೇ ಟಿಕೇಟ್ ಕೊಡುತ್ತಾ ಅವರನ್ನೇ ನಾನು ಗೆಲ್ಲುಸುತ್ತೇವೆ ಎಂದರು.
ನೈಋತ್ಯ ವಿಧಾನ ಪರಿಷತ್ ಕ್ಷೇತ್ರವು ಸುಮಾರು 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದೆ. ಈ ಬಾರಿ ಮತದಾರರ ಸಂಖ್ಯೆಯು ಹೆಚ್ಚಿದೆ. ಸುಮಾರು 15 ಬಿಜೆಪಿ-ಜೆಡಿಎಸ್ ಶಾಸಕರು ಈ ಬಾರಿ ಇದ್ದಾರೆ. ಬಿಜೆಪಿಯೇ ಹೆಚ್ಚು ನೊಂದಣಿಯನ್ನು ಈ ಬಾರಿ ಮಾಡಿದೆ. ಸುಮಾರು 81750 ಮತಗಳಿವೆ. ಅದರಲ್ಲಿ ಶಿವಮೊಗ್ಗಲ್ಲಿಯೇ ಹೆಚ್ಚಾಗಿದೆ. ಎಲ್ಲಾ ಕಡೆ ಪಕ್ಷದ ಸಂಘಟನೆ ಇರುವುದರಿಂದ ಧನಂಜಯ ಸರ್ಜಿ ಮತ್ತು ಜೆಡಿಎಸ್‍ನ ಬೋಜೇಗೌಡ ಅವರು ಮೊದಲ ಪ್ರಾಶಸ್ತ್ಯದ ಮತಗಳ ಪಡೆದು ಗೆಲ್ಲಲಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಬಿಜೆಪಿ ಮೈತ್ರಿ ಮುಂದುವರೆಯುವುದರಿಂದ ನಮಗೆ ಅನುಕೂಲವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎನ್. ಚನ್ನಬಸಪ್ಪ, ರುದ್ರೇಗೌಡರು, ಶಿವರಾಜು, ಮೋಹನ್‍ರೆಡ್ಡಿ, ನಾಗರಾಜ್, ದೀನದಯಾಳ್, ಮಂಜುನಾಥ್, ಚಂದ್ರಶೇಖರ್,ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post