ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಿಇಎಸ್ ಕಾಲೇಜಿನ #PES College ಮುಖ್ಯ ಸೆಮಿನಾರ್ ಹಾಲ್‍ನಲ್ಲಿ ಮೇ 16 ರಂದು ಐಇಇಇ-24 ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪಿಇಎಸ್ ಟ್ರಸ್ಟಿನ ಮುಖ್ಯಸ್ಥ ಡಾ. ಆರ್. ನಾಗರಾಜ್ ಹೇಳಿದರು.
ಅವರು ಇಂದು ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಇಎಸ್ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯೂ ಐಇಇಇ ಸಹಯೋಗದೊಂದಿಗೆ ಅಮೇಥಿ 2024ರ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದು ವಿದ್ಯುತ್ ಎಲೆಕ್ಟ್ರಾನಿಕ್ಸ್ ಮಾಹಿತಿ, ಕಂಪ್ಯೂಟರ್ ಸಂವಾಹನ ತಂತ್ರಜ್ಞಾನಗಳಲ್ಲಿನ ಭೂಮಿಕೆಯನ್ನು ಕೇಂದ್ರೀಕರಿಸಿ ಆಯೋಜಿಸಲಾಗಿದೆ ಎಂದರು.
ವಿಶ್ವದಾದ್ಯಂತ ಪ್ರಖ್ಯಾತ ಸಂಸ್ಥೆಗಳಿಂದ 1200ಕ್ಕೂ ಹೆಚ್ಚು ಲೇಖನಗಳು ಬಂದಿದ್ದು ಅದರಲ್ಲಿ ಆಯ್ಕೆ ಮಾಡಿಕೊಂಡು ಸುಮಾರು 200 ಪೇಪರ್‍ಗಳ ಮಂಡನೆಗೆ ಅವಕಾಶ ಮಾಡಿಕೊಡಲಾಗಿದೆ. ಸುಮಾರು 120ಕ್ಕೂ ಹೆಚ್ಚು ಪ್ರಬಂಧಗಳು ಆನ್‍ಲೈನ್‍ನಲ್ಲಿಯೇ ಮಂಡಿಸಲಿದ್ದು, ಸುಮಾರು 75ಕ್ಕೂ ಹೆಚ್ಚು ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗಲಿವೆ ಎಂದರು.
ಸೌತ್ ಕೋರಿಯಾದ ಕುನ್ಸನ್ ನ್ಯಾಷನಲ್ ವಿಶ್ವವಿದ್ಯಾನಿಲಯದ ಪ್ರೊ. ಡಾ. ಇನ್-ಹೋ ರಾ, ಯು.ಕೆ.ಯ ಟೀಸ್ಸೈಡ್ ವಿಶ್ವವಿದ್ಯಾನಿಲಯದ ಡಾ.ಗಿಲ್‍ಲೇಸಿ ಗೋವಾ ವಿವಿಯ ಪ್ರೊ.ಡಾ. ರಾಜೇಂದ್ರ ಎಸ್.ಗಡ್ ಮುಂತಾದ ಗಣ್ಯರು ಈ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಾನದಂಡಗಳು ತಾಂತ್ರಿಕ ಸಂಶೋದನೆಗಳ ಭವಿಷ್ಯವನ್ನು ಆಕಾರಗೊಳಿಸುವ ಪಾತ್ರವನ್ನು ಪರಿಚಯಿಸಲಿದ್ದಾರೆ ಎಂದರು.
ಈ ಅಂತರಾಷ್ಟ್ರೀಯ ಸಮ್ಮೇಳನದಿಂದ ನಮ್ಮ ಕಾಲೇಜಿನ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅಲ್ಲದೇ ಸ್ಥಳೀಯ ಮತ್ತು ಪ್ರಾದೇಶಿಕ ಆರ್ಥಿಕತೆಯ ಮೇಲೆ ಪ್ರಭಾವ ಭೀರಲಿದೆ. ಸ್ಥಳೀಯ ಹೋಟೆಲ್‍ಗಳ ಸೇವೆಗಳಿಗೆ ಅನುಕೂಲವಾಗಲಿದೆ. ಮತ್ತು ವಿಶ್ವವ್ಯಾಪಕತೆಯನ್ನು ವಿಸ್ತರಿಸುತ್ತದೆ ಎಂದರು.
Also read: ಪದವೀಧರ ಕ್ಷೇತ್ರ ಚುನಾವಣೆ | ಮೇ 16 | ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ನಾಮಪತ್ರ ಸಲ್ಲಿಕೆ
ಸಮ್ಮೇಳನದಲ್ಲಿ ಹಲವು ಗೋಷ್ಠಿಗಳ ಮೂಲಕ ತಾಂತ್ರಿಕ ವಿಚಾರಗಳು ಪರಿಸರ ಸ್ನೇಹಿ ಚರ್ಚೆಗಳು, ವೃತ್ತಿಪರ ಬೆಳವಣಿಗೆ ಕಲಿಕೆ ಮತ್ತು ಸಂಶೋಧನೆಗೆ ಆದ್ಯತೆ, ಶೈಕ್ಷಣಿಕ ಉತ್ಕøಷ್ಟತೆ ಹೆಚ್ಚಿಸುವ ಬಗ್ಗೆ ಮತ್ತು ವೃತ್ತಿಪರ ಬೆಳವಣಿಗೆಗೆ ಪ್ರೋತ್ಸಾಹಿಸುವ ವಾತಾವರಣವನ್ನು ನಿರ್ಮಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಿಇಎಸ್ ಟ್ರಸ್ಟಿನ ಸಿಓಓ ಬಿ.ಆರ್.ಸುಭಾಷ್ ಹಾಗೂ ಸಮ್ಮೇಳನದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್ ಹೆಚ್.ಆರ್. ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post