ಚಿನ್ಮಯ ಮಿಷನ್ ವತಿಯಿಂದ ಪರಮಪೂಜ್ಯ ಸ್ವಾಮಿ ಚಿನ್ಮಯಾನಂದರ 108ನೇ ಜಯಂತಿ ಅಂಗವಾಗಿ ಆ.13ರ ಬೆಳಿಗ್ಗೆ 10ರಿಂದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಗುರುವಂದನಾ ಹಾಗೂ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿನ್ಮಯ ಮಿಷನ್‍ನ ಶಿವಮೊಗ್ಗ ಶಾಖೆಯ ಕಾರ್ಯದರ್ಶಿ ಅರುಣ್ ಕುಮಾರ್ ತಿಳಿಸಿದರು.
ಪ್ರಸ್ತುತ ಕರ್ನಾಟಕ ಚಿನ್ಮಯ ಮಿಷನ್‍ನ ಅಧ್ಯಕ್ಷರಾದ ಸ್ವಾಮಿ ಬ್ರಹ್ಮಾನಂದ ಸರಸ್ವತಿಯವರ ಸಾನಿಧ್ಯದಲ್ಲಿ ಬೆಳಿಗ್ಗೆ 10 ಗಂಟೆಗೆ ವೇದಘೋಷದೊಂದಿಗೆ ಆರಂಭವಾಗಲಿದೆ. 10-30ಕ್ಕೆ ಒಂದು ಸಹಸ್ರ ಕಂಠದಿಂದ ಸಾಮೂಹಿಕ ಸ್ತೋತ್ರ ಪಠಣ, 11ಕ್ಕೆ ಸಾಮೂಹಿಕ ಭಜನಾ ಗಾಯನ, 11-30ಕ್ಕೆ ಅಷ್ಟೋತ್ತರ ಶತನಾಮಾವಳಿಯೊಂದಿಗೆ ಪಾದುಕಾ ಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.
12 ಗಂಟೆಗೆ ಸ್ವಾಮಿ ಬ್ರಹ್ಮಾನಂದ ಸರಸ್ವತಿಯವರಿಂದ ಸತ್ಸಂಗ ನಡೆಯಲಿದ್ದು, 1 ಗಂಟೆಗೆ ಗುರುಭಕ್ತರಿಂದ ಗುರುದಕ್ಷಿಣೆ ಸಮರ್ಪಣೆ, ಹಾಗೂ ಮಹಾಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಶಾಸರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಗಮಿಸಲಿದ್ದಾರೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







