ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ #Bajarangadal activist Harsha murder ಸಂಬಂಧ ಇಲ್ಲಿಯವರೆಗೂ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದ್ದು, 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ #SP Lakshmi Prasad ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಕರಣ ಸಂಬಂಧ ಈವರೆಗೂ ಆರು ಮಂದಿಯನ್ನು ಬಂಧಿಸಲಾಗಿದೆ. ಅದರಲ್ಲಿ ಇಬ್ಬರನ್ನು ಶಿವಮೊಗ್ಗ ನಗರದಲ್ಲಿಯೇ ದಸ್ತಗಿರಿ ಮಾಡಲಾಗಿದೆ. ಪ್ರಮುಖ ಆರೋಪಿ ಮೊಹಮದ್ ಖಾಸಿಫ್(ಎ1) ಸೇರಿದಂತೆ ನದೀಮ್(ಎ2), ನಿಹಾನ್, ಆಸಿಫ್’ವುಲ್ಲಾಖಾನ್ ಹಾಗೂ ಅಪ್ನಾನ್(ಎ6) ಅವರುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇನ್ನೂ ಕೆಲವರನ್ನು ಬಂಧಿಸಬೇಕಿದ್ದು, ಕಾರ್ಯಾಚರಣೆ ನಡೆದಿದೆ. 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಅವರಲ್ಲಿ ಬಹುತೇಕರಿಗೆ ಈ ಕೃತ್ಯದಲ್ಲಿ ಸಂಬಂಧಿವಿಲ್ಲ ಎಂಬ ವಿಚಾರ ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ ಎಂದರು.
ಆರೋಪಿಗಳ ಹಿನ್ನೆಲೆಯೇನು?
ಬಂಧಿತ ಆರು ಆರೋಪಿಗಳಲ್ಲಿ ಇಬ್ಬರು ಶಿವಮೊಗ್ಗ ನಿವಾಸಿಗಳಾಗಿದ್ದು, ಓರ್ವ ಕ್ಲರ್ಕ್ ಪೇಟೆಯವನಾಗಿದ್ದಾನೆ. ಈಗ ಬಂಧಿಸಲಾಗಿರುವ ಆರು ಆರೋಪಿಗಳೂ ಕ್ರಿಮಿನಲ್ ಹಿನ್ನೆಲೆಯುಳ್ಳವಾಗಿದ್ದು, ಇವರಲ್ಲಿ ಕೆಲವರ ವಿರುದ್ಧ ಐಪಿಸಿ ೩೦೭ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳಿವೆ ಎಂದಿದ್ದಾರೆ.
Also read: ಶಿವಮೊಗ್ಗದಲ್ಲಿ ಶುಕ್ರವಾರದವರೆಗೂ ಕರ್ಫ್ಯೂ ಮುಂದುವರಿಕೆ
ಗಲಭೆಯಲ್ಲಿ ಏನೆಲ್ಲಾ ಹಾನಿಯಾಗಿದೆ?
ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರ ಹಾಗೂ ಗಲಭೆಯಲ್ಲಿ ಒಟ್ಟು 18 ಬೈಕ್, ಎರಡು ಬೆಂಕಿ ಹಚ್ಚಿದ ಹಾಗೂ ಹಲವು ಗಾಜು ಒಡೆದ ಪ್ರಕರಣ ದಾಖಲಾಗಿದ್ದು, ಒಟ್ಟು 19 ಪ್ರಕರಣವಾಗಿದೆ. ಒಟ್ಟಾರೆಯಾಗಿ 13 ಎಫ್’ಐಆರ್ ದಾಖಲಾಗಿದೆ.
Also read: ಹತ್ಯೆ ಪ್ರಕರಣ-ಕ್ರಿಮಿನಲ್ ಹಿನ್ನೆಲೆಯ ಆರು ಮಂದಿ ಬಂಧನ: ಎಸ್’ಪಿ ಲಕ್ಷ್ಮೀ ಪ್ರಸಾದ್ ಮಾಹಿತಿ
ಹರ್ಷನ ವಿರುದ್ಧ ಪ್ರಕರಣವಿದೆಯೇ?
ಹತ್ಯೆಗೀಡಾದ ಹರ್ಷನ ವಿರುದ್ಧ 2016-17ರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದದ್ದು ಸೇರಿದ ಎರಡು ಪ್ರಕರಣಗಳು ಇವೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post