ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ #Bajarangadal activist Harsha murder ಪ್ರಕರಣ ಪ್ರಧಾನಿಯವರೆಗೂ ತಲುಪಿದ್ದು, ನಗರದಲ್ಲಿ ಶಾಂತಿ ಕಾಪಾಡುವಂತೆ ನರೇಂದ್ರ ಮೋದಿಯವರು ಸೂಚನೆ ನೀಡಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಹರ್ಷನ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಘಟನೆ ಪ್ರಧಾನಿಯವರೆಗೂ ತಲುಪಿದೆ. ಮೊಟ್ಟ ಮೊದಲನೆಯದಾಗಿ ನಗರದಲ್ಲಿ ಶಾಂತಿ ಕಾಪಾಡಿ, ಕಾನೂನು ಸುವ್ಯವಸ್ಥೆ ನಿಯಂತ್ರಿಸುವಂತೆ ಮೋದಿಯವರು ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಸಹ ತುರ್ತು ಸಭೆ ನಡೆಸಿದ್ದು, ಶಾಂತಿ ಕಾಪಾಡುವಂತೆ ಸೂಚನೆ ನೀಡಿದ್ದು, ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಹ ಇದನ್ನೇ ಸೂಚಿಸಿದ್ದಾರೆ.
Also read: ಶಿವಮೊಗ್ಗ ಗಲಭೆ ಹಿನ್ನೆಲೆ: ಡಿಜಿ ಪವೀಣ್ ಸೂದ್ ಜೊತೆ ಸಿಎಂ ಬೊಮ್ಮಾಯಿ ತುರ್ತು ಸಭೆ
ಹೀಗಾಗಿ, ಪ್ರಧಾನಿ, ಮುಖ್ಯಮಂತ್ರಿಯವರ ಮಾತಿಗೆ ಬೆಲೆ ಕೊಡಬೇಕಾಗಿರುವುದು ಎಲ್ಲ ಕರ್ತವ್ಯ. ಆದ್ದರಿಂದ ಭಾವೋದ್ವೇಗಕ್ಕೆ ಒಳಗಾಗದೇ ನಾಗರೀಕರು ಶಾಂತಿ ಕಾಪಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post