ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ವರ್ಷವೂ ಮೇ 28 ರಂದು ಮೆನ್ ಸ್ಟ್ರಲ್ ಹೈಜೀನ್ ಡೇ (Menstrual Hygiene Day) ಯನ್ನು ಆಚರಿಸಲಾಗುತ್ತದೆ. ಮುಟ್ಟಿನ ಸಮಯದಲ್ಲಿ ಅವಶ್ಯವಿರುವ ನೈರ್ಮಲ್ಯದ ಅರಿವು ಮೂಡಿಸಲು ಜಾಗತಿಕ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಸದ್ಗುರು ಪೌಂಡೇಷನ್, ಶ್ರೀ ಸದ್ಗುರು ಚಿಕಿತ್ಸಾಲಯದ ಸಹಯೋಗದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಹೆಣ್ಣು ಮಕ್ಕಳಿಗೆ ಆರು ದಿನಗಳ ಕಾಲ ಎಲ್ಲಾ ರೀತಿಯ ಮುಟ್ಟಿನ ತೊಂದರೆಗಳಿಗೆ ಉಚಿತ ತಪಾಸಣೆ ಹಾಗೂ ಸಲಹೆಗಳನ್ನು ನೀಡಲು ಶಿಬಿರವನ್ನು ಆಯೋಜಿಸಲಾಗಿದೆ.

29.05.23 ರಿಂದ 03.06.23ರ ವರೆಗೆ ನಡೆಯುವ ಈ ಶಿಬಿರಕ್ಕೆ ವಿದ್ಯಾರ್ಥಿನಿಯರು ತಮ್ಮ ಕಾಲೇಜಿನ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು.
ಸಮಯ – ಸಾಯಂಕಾಲ 5.00 ಗಂಟೆಯಿಂದ 8.00 ಗಂಟೆಯವರೆಗೆ
ಸ್ಥಳ – ಶ್ರೀ ಸದ್ಗುರು ಚಿಕಿತ್ಸಾಲಯ, ಸರ್ ಎಂ.ವಿ. ಕಾಂಪ್ಲೆಕ್ಸ್, ಮುಖ್ಯ ರಸ್ತೆ, ತಿಲಕ್ ನಗರ, ಶಿವಮೊಗ್ಗ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 08182-355349, 97419 88223.










Discussion about this post