ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗುರು ಪುಷ್ಯ ಯೋಗದ ಪ್ರಯುಕ್ತ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರು ರಾಯರ ಬೃಂದಾವನಕ್ಕೆ ಮಾವಿನ ಹಣ್ಣಿನ ಸೀಕರನಿಯ ಅಭಿಷೇಕ ಶ್ರೀ ಗುರು ರಾಘವೇಂದ್ರ ಸ್ತೋತ್ರ ಪಾರಾಯಣದೊಂದಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು.
ನಂತರ ನವರತ್ನ ಕವಚದಿಂದ ಅಲಂಕಾರವು ನೆರವೇರಿತು, ಸಂಜೆ ಉತ್ಸವಗಳೊಂದಿಗೆ ವಿಶೇಷವಾಗಿ ದಾಸವಾಣಿಯ ಕಾರ್ಯಕ್ರಮವನ್ನು ಶ್ರೀಮತಿ ಗೀತಾ ಬತ್ತದ್ ರವರು ಶುಶ್ರಾವ್ಯವಾಗಿ ಹಾಡಿದರು. ಇವರ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ಅಮಿತ್ ಶರ್ಮ, ತಬಲವಾದನ ಶ್ರೀನಿವಾಸ ಕಾಖಂಡಕಿ ಅವರು ಸಾತ್ ನೀಡಿದರು.
ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
Discussion about this post