ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಡಿಯೂರಪ್ಪನವರಿಗೆ ಸುಳ್ಳು ಹೇಳಿ ಅಭ್ಯಾಸವಿದೆ. ಬೇಕಾದರೆ ಅವರೇ ಘಂಟೆ ಬಾರಿಸಬಹುದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಅವರು ಮಾಜಿ ಸಿಎಂ ಯಡಿಯೂರಪ್ಪ #Yadiyurappa ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ದಮ್ಕಿ ಹಾಕಿದ್ದಾರೆ ಎನ್ನುವ ವಿಚಾರಕ್ಕೆ ಈಶ್ವರಪ್ಪ ಅವರು ದೇವಸ್ಥಾನದಲ್ಲಿ ಘಂಟೆ ಬಾರಿಸಲಿ ಎಂದು ರಾಘವೇಂದ್ರ #B Y Raghavendra ಅವರು ಹೇಳಿದಾಗ ನಾನು ನೀನು ಬೇಡ, ನಿಮ್ಮಪ್ಪನನ್ನು ಕಳುಹಿಸು, ನನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿಲ್ಲ ಎಂದು ಹೇಳಿ ಪ್ರಮಾಣ ಮಾಡಲಿ ಎಂದಿದ್ದೆ. ನಾನು ಮನೆಯಲ್ಲಿ ದೇವರ ಪೂಜೆ ಮಾಡುವಾಗ ಘಂಟೆ ಬಾರಿಸಿದ್ದೇನೆ ಹೊರೆತು ಸುಳ್ಳು ಹೇಳಿ ದೇವಸ್ಥಾನದಲ್ಲಿ ಘಂಟೆ ಭಾರಿಸುವ ಅಭ್ಯಾಸ ನನಗಿಲ್ಲ. ಯಡಿಯೂರಪ್ಪ ಬೇಕಾದರೆ ಘಂಟೆ ಬಾರಿಸಬಹುದು. ಅವರಿಗೆ ಸುಳ್ಳು ಹೇಳಿ ಅಭ್ಯಾಸ ಇದೆ ಎಂದು ಕುಟುಕಿದರು.

ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಹಿಂದುಳಿದ ವರ್ಗದವರು ಇಷ್ಟೊಂದು ಸಂಖ್ಯೆಯಲ್ಲಿ ಪಕ್ಷಕ್ಕೆ ಬರುತ್ತಿರುವುದನ್ನು ಯಡಿಯೂರಪ್ಪ ಅವರು ಸ್ವಾಗತ ಮಾಡಬೇಕಿತ್ತು. ಆದರೆ, ಯಡಿಯೂರಪ್ಪ ಅವರು ಅದನ್ನು ನಿಲ್ಲಿಸುವಂತೆ ವರಿಷ್ಠರಿಗೆ ದೂರು ಕೊಟ್ಟಿದ್ದರು. ವರಿಷ್ಠರ ಸೂಚನೆಯಂತೆ ಅದನ್ನು ನಿಲ್ಲಿಸಿದ್ದೆ. ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಬೇಡಿ ಎಂದಾಗಲೂ ಅವರ ಸೂಚನೆಯನ್ನು ಪಾಲನೆ ಮಾಡಿದೆ. ಆದರೆ, ಈಗ ಸ್ಪರ್ಧೆ ಯಾಕೆ ಎಂಬುದುನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ತಿಳಿಸಿ ಅವರನ್ನು ಅಪ್ಪಿಸುವ ಶಕ್ತಿ ಈಗ ನನಗೆ ಬಂದಿದೆ ಎಂದು ತಿಳಿಸಿದರು.

Also read: ಮಂಡ್ಯ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾ ಅಂಬರೀಶ್ | ಬಿಜೆಪಿಗೆ ಬೆಂಬಲ ಘೋಷಣೆ
ನಾನು ಸ್ಪರ್ಧೆ ಘೋಷಣೆ ಮಾಡಿದ ಬಳಿಕ ಬಿಜೆಪಿಯ ಕಾರ್ಯಕರ್ತರ ಗೌರವ ಹೆಚ್ಚಾಗಿದೆ. ನನ್ನ ಜೊತೆ ಅಮಿತ್ ಶಾ ನನಗೆ ಕರೆ ಮಾಡಿ ಮಾತನಾಡಿದ್ದಾರೆ. 10 ವರ್ಷದಲ್ಲಿ ಒಮ್ಮೆಯೂ ನನ್ನ ಮನೆಗೆ ಬಾರದ ಯಡಿಯೂರಪ್ಪ ಅವರು ಈಶ್ವರಪ್ಪ ಮನೆಗೆ ಹೋಗುತ್ತೇನೆ ಎನ್ನುತ್ತಿದ್ದಾರೆ. ಇನ್ನು ರಾಘವೇಂದ್ರ ಅವರು ಪ್ರತಿ ಕಾರ್ಯಕರ್ತರ ಮನೆಗೆ ಹೋಗುತ್ತಿದ್ದಾರೆ. ಇದೆಲ್ಲವೂ ನನ್ನ ಸ್ಪರ್ಧೆಯ ಪರಿಣಾಮ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post