ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ Radio Shivamogga ಹಾಗೂ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ Sahyadri Narayana Multi Speciality Hospital ಸಹಯೋಗದಲ್ಲಿ ವಿಶೇಷ ಬಾನುಲಿ ಸರಣಿ ಮಾತುಕತೆ ರೂಪುಗೊಂಡಿದೆ. ಈ ಸರಣಿ ಸೆ.25ರಿಂದ ಸೆ.29ರವರೆಗೆ ರೇಡಿಯೋ ಶಿವಮೊಗ್ಗದಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ 9:30ರವರೆಗೆ ಪ್ರಸಾರವಾಗಲಿದೆ.
ಸೆ. 29ರ ವಿಶ್ವ ಹೃದಯ ದಿನದ Heart Day ಅಂಗವಾಗಿ ಈ ಸರಣಿ ನಡೆಯುತ್ತಿದೆ. ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಶ್ರೀವತ್ಸ, ಡಾ. ಅಶ್ವಲ್, ಡಾ. ಶರತ್, ಡಾ. ಬಾಲಸುಬ್ರಮಣಿ, ಡಾ. ವಿಕ್ರಮ್ ಮಹತ್ವದ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಆರ್ ಜೆ ಅಶ್ವಿನಿ ಹಾಗೂ ಆರ್ ಜೆ ಅರ್ಪಿತಾ ಇದನ್ನು ನಡೆಸಿಕೊಡಲಿದ್ದಾರೆ. ನಿಮ್ಮ ಹೃದಯದ ಆರೋಗ್ಯ, ಲಾಲನೆ, ಪಾಲನೆಯ ಬಗ್ಗೆ ಇದರಲ್ಲಿ ಮಾಹಿತಿ ದೊರೆಯಲಿದೆ. ಹೃದಯದ ಅನಾರೋಗ್ಯ ಸಮಯದಲ್ಲಿ ಬೇಕಾಗುವ ಕಾಳಜಿಯ ಕುರಿತಾಗಿ ಕಾರ್ಯಕ್ರಮ ಇರುತ್ತದೆ.
ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ ನಲ್ಲಿರುವ ಇನ್ ಬಿಲ್ಟ್ ಎಫ್ ಎಂ ಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಸ್ವಂತದ್ದೇ ಆಪ್ ಸಹಾ ಹೊಂದಿದ್ದು, ಅದನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಅದರ ಲಿಂಗ್ ಹೀಗಿದೆ. https://play.google.com/store/apps/details?id=com.atclabs.radioshivmogga
Also read: ಹಿಂದುಳಿದ ಜಾತಿ ಮಹಿಳೆಯರಿಗೆ ಉಪಮೀಸಲಾತಿ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
ಹೆಚ್ಚಿನ ಮಾಹಿತಿಗೆ ( ಮೊ: 7259176279) ಸಂಪರ್ಕಿಸಬಹುದು. ಆಸಕ್ತರು ಕಾರ್ಯಕ್ರಮವನ್ನು ಆಲಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಎಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post