ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಜನಿಕ ಆರೋಗ್ಯ ದಂತ ಚಿಕಿತ್ಸಾ ಇಲಾಖೆ ವತಿಯಿಂದ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಸಂಶೋಧನಾ ವಿಧಾನ ಮತ್ತು ಸಂಶೋಧನಾ ಅಂಕಿಅಂಶಗಳ ಕುರಿತಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಆರೋಗ್ಯ ಸಂಶೋಧನೆ, ವಿವಿಧ ಸಂಶೋಧನಾ ವಿನ್ಯಾಸ, ಕಲ್ಪನೆ(ಊಹೆ) ಪರೀಕ್ಷೆ, ಜೈವಿಕ ಅಂಕಿ ಅಂಶಗಳು ಮತ್ತು ಸಾಫ್ಟ್ ವೇರ್ ಪ್ರದರ್ಶನ ಸೇರಿದಂತೆ ವಿವಿಧ ವಿಚಾರಗಳ ಕುರಿತಾಗಿ ಕಾರ್ಯಾಗಾರದಲ್ಲಿ ಚರ್ಚೆ ಹಾಗೂ ಪ್ರದರ್ಶನ ನಡೆಯಿತು.
Also read: India can’t be in climate change denial mode warn experts
ಡಾ. ಎಲ್. ನಾಗೇಶ್, ಡಾ. ಪೂಜಾ ಸಿ, ಯಾವಗಲ್ ಮತ್ತು ಡಾ. ಉಮೇಶ್ ವಾಗ್ದವೆ ಸೇರಿದಂತೆ ಗೌರವಾನ್ವಿತ ಭಾಷಣಕಾರರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸಂಶೋಧನಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಪ್ರಾಯೋಗಿಕ ಜ್ಞಾನ, ಪುಸ್ತಕ ಜ್ಞಾನವನ್ನು ಉದಾಹರಣೆ ಸಹಿತ ವಿವರಿಸಲಾಯಿತು. ದಂತ ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯದ ಸಂಶೋಧನಾ ಉಪಕ್ರಮಗಳನ್ನು ಬಲಪಡಿಸುವ ಭರವಸೆ ನೀಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















