ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನಲ್ಲಿ ಸುರಿಯುತ್ತಿರುವ ನಿರಂತರ ಭಾರೀ ಮಳೆ ಹಲವು ಅವಾಂತರಗಳು ಸೃಷ್ಠಿಯಾಗಿದ್ದು, ಗ್ರಾಮೀಣ ಪ್ರದೇಶದ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಹರಿಮನೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ವಾಹನಗಳು ಸಂಚರಿಸುವುದು ಮಾತ್ರವಲ್ಲ ಜನರು ನಡೆದುಕೊಂಡು ಓಡಾಡುವುದೇ ದುಸ್ಥರವಾಗಿ ಪರಿಣಮಿಸಿದೆ.
ಇಡೀ ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿ ಪರಿಣಮಿಸಿದೆ. ನಿಟ್ಟೂರು ಸಮೀಪದ ಹರಿಮನೆ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ಕೆಸರಿನಲ್ಲಿ ಸಿಲುಕಿ ಪರದಾಡುವಂತಾಗಿದೆ.
ಈ ವಿಚಾರದಲ್ಲಿ ನಿಟ್ಟೂರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಸದಸ್ಯರ ನಿರ್ಲಕ್ಷ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಹೀಗಾಗಿ, ಜನರೇ ತಾತ್ಕಾಲಿಕವಾಗಿ ದುರಸ್ಥಿಗೆ ಮುಂದಾದರು. ಟ್ರಾಕ್ಟರ್’ನಲ್ಲಿ ಬೃಹತ್ ಗಾತ್ರದ ಕಲ್ಲುಗಳನ್ನು ತಂದ ಗ್ರಾಮಸ್ಥರು ಗುಂಡಿಗಳಿಗೆ ಹಾಕಿ ಮುಚ್ಚಲು ಪ್ರಯತ್ನ ಮಾಡಿದ್ದಾರೆ.
Also read: ಸಿಎ ಪರೀಕ್ಷೆ ಫಲಿತಾಂಶ: ಕ್ರಿಯೇಟಿವ್ ಕಾಲೇಜು ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು, ಶಾಲಾ ವಿದ್ಯಾರ್ಥಿಗಳು ತೆರಳಲು ಪರದಾಡುವಂತಾದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಈ ಕಾರ್ಯ ಮಾಡಿದ್ದಾರೆ.
ಇದೇ ವೇಳೆ ಇಷ್ಟು ದುಸ್ಥಿತಿಯಿದ್ದರೂ ಸ್ಥಳೀಯಾಡಳಿತ ನಿರ್ಲಕ್ಷ ವಹಿಸಿರುವುದನ್ನು ಗ್ರಾಮಸ್ಥರು ಕಿಡಿ ಕಾರಿದ್ದು, ರಸ್ತೆಯನ್ನು ಸಂಪೂರ್ಣವಾಗಿ ದುರಸ್ಥಿ ಮಾಡುವಂತೆ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post