ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪಕ್ಷದ ವರಿಷ್ಠರು ಹೇಳಿದರೆ ಉಪಮುಖ್ಯಮಂತ್ರಿ ಆಗುತ್ತೇನೆ, ಮಂತ್ರಿ ಆಗು ಅಂದರೂ ಸಹ ಆಗುತ್ತೇನೆ. ಶಾಸಕನಾಗಿರು ಅಂದರೂ ಸರಿಯೇ. ಪಕ್ಷ ಹೇಳಿದಂತೆ ಕೇಳುವ ನಿಷ್ಠಾವಂತ ನಾನು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಖಾತೆ ಸಿಗುತ್ತದೆಯೋ ಬಿಡುತ್ತದೆಯೋ ಅದರ ಬಗ್ಗೆ ಯೋಚನೆಯಿಲ್ಲ. ಇದೇ ಖಾತೆ ಬೇಕು ಎಂದು ಕೇಳಿಲ್ಲ. ತಮಗೂ ಅನೇಕರು ಕರೆ ಮಾಡಿ ನೀವು ಡಿಸಿಎಂ ಅಗಬೇಕು ಅಂತ ಹೇಳಿದ್ದಾರೆ. ಆದರೆ ತಾನು ಪಕ್ಷದ ಕಾರ್ಯಕರ್ತ, ಅನೇಕ ಹಿಂದುಳಿದ ವರ್ಗದ ಮಠಾಧೀಶರು, ಹಲವಾರು ಸ್ವಾಮೀಜಿಗಳು ಸಹ ನನಗೆ ಫೋನ್ ಮಾಡಿ ಡಿಸಿಎಂ ಆಗಿ ಎಂದು ಸಲಹೆ ನೀಡಿದ್ದಾರೆ. ಆದರೆ ತಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದು ತಿಳಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















