ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹರ್ಷ ಒಬ್ಬ ಉತ್ತಮ ಕ್ರಿಯಾಶೀಲ ಹಿಂದೂ ಸಮಾಜದ ಕಾರ್ಯಕರ್ತ. ಮತಾಂಧರಿಂದ ಧರ್ಮಾಧಾರಿತವಾಗಿ ಹರ್ಷನ ಹತ್ಯೆಯಾಗಿರುವುದು #Harsha murder ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ ಅವರೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸ ಮೂಡಿಸಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ #MP Prathap Simha ಹೇಳಿದರು.
ಫೆ.20ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳ #Bhajarangadal ಕಾರ್ಯಕರ್ತ ಹರ್ಷ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೂ ಇದೇ ಸಂದರ್ಭದಲ್ಲಿ ಕುಟುಂಬಸ್ಥರಿಗೆ 5ಲಕ್ಷ ರೂ ಆರ್ಥಿಕ ನೆರವು ಘೋಷಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಾಧಾರಿತವಾಗಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದು, ಇದನ್ನು ಶಾಶ್ವತವಾಗಿ ನಿಲ್ಲಿಸಬೇಕು ಹಾಗೂ ಆರೋಪಿಗಳ ವಿರುದ್ದ ಕೋಕಾ ಕಾಯ್ದೆ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ನಡೆದು ಒಂದು ವಾರ ಕಳೆದರೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಏಕೆ ಭೇಟಿ ನೀಡುತ್ತಿಲ್ಲ . ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಮನಸ್ಸು ಮಾಡುತ್ತಿಲ್ಲ ಏಕೆ. ಒಬ್ಬ ದನಗಳ್ಳ ಸತ್ತಾಗಲೂ ಸಾಂತ್ವಾನ ಹೇಳಿ ಪರಿಹಾರ ಘೋಷಿಸುವ ಸಿದ್ದರಾಮಯ್ಯನವರು ಧರ್ಮಾಂಧತೆಗೆ ಬಲಿಯಾಗಿರುವ ಹರ್ಷ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
Also read: ಶಿವಮೊಗ್ಗ ಜಿಲ್ಲೆಯ ವಿವಿಧ ಅಭಿವೃದ್ಧಿ ಪ್ರಸ್ತಾವನೆಗಳ ಮಂಜೂರಾತಿಗಾಗಿ ಸಿಎಂಗೆ ಸಂಸದ ರಾಘವೇಂದ್ರ ಮನವಿ
ರಾಜಕಾರಣ ಮಾಡಲು ಸಿನಿಮಾ ಪ್ರೀಮಿಯರ್ ಶೋನಲ್ಲಿ ಭಾಗವಹಿಸಲು ಇರುವ ಸಮಯ ಕನ್ನಡಿಗನ ಮನೆಗೆ ಭೇಟಿ ನೀಡಲು ಆಗುವುದಿಲ್ಲವೇ? ಅನ್ಯಕೋಮಿನ ಸಹೋದರರ ಬಗ್ಗೆ ಇರುವ ಕಾಳಜಿ ಮತ್ತು ಚಿಂತೆ ನಮ್ಮ ಕನ್ನಡಿಗ ಹಿಂದೂ ಕಾರ್ಯಕರ್ತರ ಮೇಲೆ ಇಲ್ಲದೆ ಇರುವುದು ದುರಂತವೇ ಸರಿ ಎಂದರು.
ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ನಿರ್ಮಾಣವಾಗಲಿದೆ ಹೊರತು ನಮ್ಮ ಪ್ರಜಾಪ್ರಭುತ್ವಕ್ಕೆ ಪೂರಕವಾದ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಮಡಿಕೇರಿಯಲ್ಲಿ ರಾಜು ಹತ್ಯೆಯಾದಾಗ ಸಿದ್ದರಾಮಯ್ಯನವರ ಸರ್ಕಾರ ಅನೇಕ ಪ್ರತಿಭಟನೆಗಳ ನಂತರ 100 ದಿನಗಳ ತರುವಾಯ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ಆದರೆ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಹರ್ಷ ಹತ್ಯೆ ಆರೋಪಿಗಳನ್ನು ಕೇವಲ 48 ಗಂಟೆಗಳಲ್ಲಿ ಬಂಧಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಧರ್ಮಾಧಾರಿತ ಹತ್ಯೆಗಳು ಶಾಶ್ವತವಾಗಿ ನಿಲ್ಲಲಿದೆ ಎಂಬ ವಿಶ್ವಾಸವಿದೆ ಎಂದರು.
Also read: ಉಕ್ರೇನ್‌ನಿಂದ ರೊಮೇನಿಯಾ ತಲುಪಿದ 470ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು
ಈಶ್ವರಪ್ಪ ಕುಟುಂಬದಿಂದ 10 ಲಕ್ಷ ಆರ್ಥಿಕ ನೆರವು:
ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಕೆ.ಎಸ್.ಈಶ್ವರಪ್ಪ ಪತ್ನಿ ಜಯಲಕ್ಷ್ಮೀ, ಪುತ್ರ ಕಾಂತೇಶ್ 10 ಲಕ್ಷದ ಚೆಕ್ ನೀಡಿ ಆರ್ಥಿಕ ನೆರವು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post