ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಸ್ಟೋರ್ ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿ ವಂಚಿಸಿ ಹಣ ನೀಡದೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಿವಮೊಗ್ಗದ ಮಾಲತೇಶ್, ರವಿಕುಮಾರ್, ಅಮೃತ ಹಾಗೂ ಇತರರು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ SPMithunkumar ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ತಾಲ್ಲೂಕಿನ ಸುಮಾರು ಹದಿನೈದು ಜನ ಈ ಸ್ಟೋರ್ ಹೆಸರಿನ ಸಂಸ್ಥೆಗೆ ಹಣ ಹೂಡಲು ಮನವೊಲಿಸಿ ಏನಾದರೂ ಮೋಸವಾದರೆ ನಾವೇ ಕೊಡುವುದಾಗಿ ಹೇಳಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಿರಾಗ್ ಅರ್ಥ್ ಮೂವರ್ಸ್ ನ ರೇವಪ್ಪ ಗೌಡ, ಶಿವಮೊಗ್ಗದ ಶಿಕ್ಷಕ ಉಮೇಶ್, ರಾಣೆಬೆನ್ನೂರಿನ ವೀರೇಂದ್ರ ಪಾಟೀಲ್ ಎಂಬುವರು ಸೇರಿ ನಮಗೆ ನಂಬಿಕೆ ದ್ರೋಹ ಮಾಡಿ ಲಕ್ಷಾಂತರ ರೂ ಕಟ್ಟಿಸಿಕೊಂಡು ಈಗ ಹಣ ಕೇಳಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಮೂವರು ನಮ್ಮ ಹಣವನ್ನು ಈ ಸ್ಟೋರ್ ಗೆ ಹಣ ಕಟ್ಟಿದ್ದಾರೋ ಇಲ್ಲವೋ ಎಂಬುದು ಸಹ ನಮಗೆ ಗೊತ್ತಿಲ್ಲ. ಮೊದಲು ನಿಮಗೆ ಹಣ ಬರುತ್ತದೆ ಎಂದು ಹೇಳುತ್ತಲೇ ದಿನ ತಳ್ಳುತ್ತಿದ್ದ ರೇವಪ್ಪ ಗೌಡ ಈಗ ಹಣದ ವಿಚಾರ ಕೇಳಿದರೆ ಯಾರ ಬಳಿ ಹೇಳಿದರೂ ನನ್ನನ್ನು ಏನು ಮಾಡಲು ಆಗುವುದಿಲ್ಲ. ನಮ್ಮ ಹುಡುಗರಿಗೆ ಹೇಳಿ ನಿಮಗೆ ಬಡಿಸುತ್ತೇನೆ. ನನ್ನ ತಂಟೆಗೆ ಬರಬೇಡಿ ಎಂದು ಬೆದರಿಸುತ್ತಿದ್ದಾರೆಂದು ಹೇಳಿದ್ದಾರೆ.

Also read: ಕ್ಲುಲಕ ಕಾರಣಕ್ಕೆ ಮಹಿಳೆ ಮೇಲೆ ದೌರ್ಜನ್ಯ ಹಿನ್ನೆಲೆ: ಬಿಜೆಪಿ ಮಹಿಳಾ ಮೋರ್ಚಾ ಖಂಡನೆ
ಜಯನಗರ ಇನ್ಸ್ ಸ್ಪೆಕ್ಟರ್ ಗೆ ಎಸ್.ಪಿ ಸೂಚನೆ:
ಮನವಿ ಸ್ವೀಕರಿಸಿ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಗೆ ಸೂಚನೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಪ್ರಕರಣದ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

ಮೋಸಕ್ಕೊಳಗಾದರು ಸಂಪರ್ಕಿಸಿ:
ಈ ಸ್ಟೋರ್ ಹೆಸರಿನಲ್ಲಿ ಲಕ್ಷಾಂತರ ರೂ ಕಳೆದುಕೊಂಡವರು ಒಗ್ಗಟ್ಟಾಗಿ ನಮ್ಮ ಹಣ ಪಡೆಯಲು ಕೆಲಸ ಮಾಡಬೇಕಾಗಿದೆ. ಇಲ್ಲಿ ಮೋಸಕ್ಕೆ ಒಳಗಾದವರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ. ಅದರಲ್ಲಿ ನಿಮಗೆ ನಂಬಿಕೆ ದ್ರೋಹ ಮಾಡಿದವರ Stability ಪ್ರಕರಣ ದಾಖಲಿಸುವಂತೆ ಮಾಡಿ. ಹೆಚ್ಚಿನ ವಿವರ ಹಾಗೂ ಸಂಪರ್ಕಕ್ಕೆ 9986237799, 7899574555,7204824788, 9980065925 ಗೆಕರೆ ಮಾಡಬಹುದು.









Discussion about this post