ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಮೃತ ಭಾರತ ಸಂಭ್ರಮಾಚರಣೆಯ ಪ್ರಯುಕ್ತ ಬಸವನಗಂಗೂರು ಸಹಿಪ್ರಾಶಾಲೆ, ಅಬ್ಬಲಗೆರೆ ಗ್ರಾಮ ಪಂಚಾಯತಿ ಹಾಗೂ ಮನ್ವಂತರ ಮಹಿಳಾಮಂಡಳದ ಸಹಯೋಗದಲ್ಲಿ ಹರ್ ಘರ್ ಮೆ ತಿರಂಗಾ Har Ghar Tiranga ಧ್ವಜಾರೋಹಣ ಕಾರ್ಯಕ್ರಮ ಜರುಗಿತು.
ಮಕ್ಕಳಿಂದ ಜಾಥಾ ನಡೆಸಲಾಯಿತು. ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಪ್ರಮುಖರ ಮನೆಯ ಮೇಲೆ ಧ್ವಜಾರೋಹಣ ಮಾಡಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಯೋಧರು, ರಾಷ್ಟ್ರ ಭಕ್ತರು ನೀಡಿದ ಅಮೂಲ್ಯ ಬಲಿದಾನ ಕೊಡುಗೆಯ ಬಗ್ಗೆ ಶ್ರೀರಂಜಿನಿ ದತ್ತಾತ್ರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸಮ್ಮ, ಸದಸ್ಯರಾದ ದೇವಮ್ಮ , ವಿಜಯ್ ಕುಮಾರ್, ರಾಜಶೇಖರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ನಟರಾಜ್, ಸದಸ್ಯರಾದ ರೋಜಾ, ವಿಜಯ್ ಕುಮಾರ್ ಸಂತೋಷ್ , ಉಷಾ, ಶಾಲೆಯ ಮುಖೋಪಾಧ್ಯಾಯರಾದ ವಿದ್ಯಾ ಆಣ್ಣಪ್ಪ , ಶಿಕ್ಷಕರಾದ ಸವಿತಾ, ರುದ್ರಮೂರ್ತಿ, ಮಾರುತಿ ನಾಯಕ್ ಉಪಸ್ಥಿತರಿದ್ದರು.
Also read: ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















