ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತರ್ ಶಾಲಾ ಮಟ್ಟದ ನಳಂದ ಚೆಸ್ ಸ್ಪರ್ಧೆಯಲ್ಲಿ ಜೈನ್ ಪಬ್ಲಿಕ್ ಶಾಲೆಗೆ Jain Public School ರೋಲಿಂಗ್ ಶೀಲ್ಡ್ ಸಂದಿದೆ.
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜೈನ್ ಪಬ್ಲಿಕ್ ಶಾಲೆ ಸತತ 12 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಜಿಲ್ಲಾ ಮಟ್ಟದ ಅಂತರ್ ಶಾಲಾ ಮಟ್ಟದ ನಳಂದ ಚೆಸ್ ಅಕಾಡೆಮಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಅನರ್ಘ್ಯ ಎ. ಶೆಟ್ಟಿ 12 ವರ್ಷದ ಕೆಟಗರಿಯಲ್ಲಿ ಪ್ರಥಮ ಬಹುಮಾನಗಳಿಸಿ ರೋಲಿಂಗ್ ಶೇಲ್ಡ್ ನ್ನು ಶಾಲೆಗೆ ತಂದಿದ್ದಾಳೆ.
Also read: ಮಾರ್ಚ್ 11-16: ದುರ್ಗಿಗುಡಿ ರಾಯರ ಮಠದಲ್ಲಿ ಗುರು ಸಪ್ತಾಹ | ವಿವಿಧ ಕಾರ್ಯಕ್ರಮ ಆಯೋಜನೆ
ಅನರ್ಘ್ಯ ಓದಿನಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ನೃತ್ಯ, ಕಲೆ, ಸಂಗೀತದಲ್ಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾಳೆ. ಈಕೆ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡರು ಸಹ ಗೆಲುವನ್ನು ತನ್ನದಾಗಿಸಿ ಕೊಳ್ಳುವ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುತ್ತಾಳೆ.
ಇಂತಹ ಜಿಲ್ಲಾ ಮಟ್ಟದ ರೋಲಿಂಗ್ ಶೀಲ್ಡ್ ನ್ನು ತನ್ನದಾಗಿಸಿಕೊಳ್ಳಲು ಸಹಕರಿಸಿದ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರಿಗೆ ಸಂಸ್ಥೆಯು ಆಭಾರಿಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post