ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತರಂಗದ ಅಭಿವ್ಯಕ್ತಿತನ ಕೌಶಲ್ಯಯುಕ್ತ ಬದುಕಿಗೆ ಪ್ರೇರಣದಾಯಕವಾಗುತ್ತದೆ ಎಂದು ಮನ್ವಂತರ ಮಹಿಳಾ ಮಂಡಳಿ ಅಧ್ಯಕ್ಷೆ ರಂಜಿನಿ ದತ್ತಾತ್ರಿ ಅಭಿಪ್ರಾಯಟಪ್ಟರು.
ಮನ್ವಂತರ ಮಹಿಳಾ ಮಂಡಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ ಜೀವನದ ಗುರಿಯೇ ಸಾಂಘಿಕ ಜೀವನ. ಪರಸ್ಪರ ಸಹಾಯ, ಸಹಕಾರದಿಂದ ಬದುಕುವುದೇ ಜೀವನದ ಗುರಿ. ಸಮಾಜದ ಸಂಬಂಧಗಳನ್ನು ಜೇಡರಬಲೆಗೆ, ಜೇನುಗೂಡಿಗೆ ಹೋಲಿಸುತ್ತಾರೆ. ಈ ಗೂಡುಗಳ ನಾಯಕಿ, ನಿರ್ವಾಹಕಿ ಆ ಗೂಡಿನ ಹಣ್ಣು ಜೇಡ, ಹೆಣ್ಣು ಜೇನು ಆಗಿರುತ್ತದೆ. ಹಾಗೇ ಸಮಾಜದ ಸಾಂಘಿಕ ಜೀವನದ ನಿರ್ವಾಹಕಿ ಮಹಿಳೆಯೇ ಆಗಿರುತ್ತಾಳೆ. ತನಗೆ ಅರಿವಿಲ್ಲದೆಯೇ ಕುಟುಂಬ – ಸಮಾಜ- ವೈಕ್ತಿಗಳ ನಡುವೆ ಸಂಬಂಧದ ಮಾಲೆ ಹೆಣೆಯುತ್ತಾ ಸ್ವಸ್ತ ಸಮಾಜವನ್ನು ಸಾದರಪಡಿಸುತ್ತಾ ಸಾಗುತ್ತಾಳೆ ಮಹಿಳೆ ಎಂದರು.
ಯಾವುದೇ ದೇಶದಲ್ಲಿ ಸಮನ್ವಯತೆ-ಸಂತುಲನತೆ-ಸಂಭ್ರಮದ ನೆಲೆ ಗಟ್ಟಿಯಾಗಿದೆ ಎಂದರೆ ಅದಕ್ಕೆ ಮಹಿಳೆಯೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಹುದು. ಕುಟುಂಬವನ್ನು ನಿರ್ವಹಿಸುವ ಮಹಿಳೆ ಮೊದಲು ಕುಟುಂಬದ ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸಿ, ಪರಸ್ಪರರಲ್ಲಿ ಪ್ರೀತಿ, ಸ್ನೇಹ, ಮಮತೆ ಹಂಚಿ, ಉಣಬಡಿಸಿ, ಅವರಲ್ಲಿಯೂ ಈ ಎಲ್ಲ ಗುಣಗಳನ್ನು ಬೆಳೆಸುತ್ತಾಳೆ. ಕುಟುಂಬದ ಸದಸ್ಯರೆಲ್ಲರೂ ಈ ಎಲ್ಲವನ್ನು ಸಮಾಜಕ್ಕೂ ಉಣಬಡಿಸಬೇಕೆಂದು ಕಲಿಸುತ್ತಾಳೆ ಎಂದು ಅಭಿಪ್ರಾಯಪಟ್ಟರು.
ಸೃಜನಶೀಲತೆ, ಕೌಶಲ್ಯ, ಚಾಕಚಕ್ಯತೆಯ ಹಾದಿಯಲ್ಲಿ ಮುನ್ನಡೆದಿರುವ ಮಹಿಳೆ ಹೊಸ ಮನ್ವಂತರವನ್ನು ಸೃಷ್ಠಿಸಿದ್ದಾಳೆ ಕೂಡ. ತನ್ನ ಬದುಕಿನ ಪ್ರಮುಖ ಘಟ್ಟಗಳಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಹೆಚ್ಚಿನ ಮಹಿಳೆಯರು ಪಡೆದಿದ್ದಾರೆ. ಇದು ಮತ್ತಷ್ಟು ಕಾರ್ಯರೂಪಕ್ಕೆ ಬರಬೇಕು. ನಾವು ಗಳಿಸಿದ ಭೌದ್ಧಿಕ ಸಂಪತ್ತು ನಮ್ಮ ಕೌಟುಂಬಿಕ ಜೀವನದ ನೆಮ್ಮದಿಯೊಂದಿಗೆ ಸಾಮಾಜಿಕ ಸವಾಸ್ಥ್ಯ ಕಾಪಾಡುವ ದಿಸೆಯಲ್ಲಿ ಮತ್ತಷ್ಟು ತೀವ್ರವಾಗಬೇಕು. ಹೆಣ್ಣು ಎಂದೂ ಚೈತನ್ಯದ ಚಿಲುಮೆಯೇ. ಕುಟುಂಬ ಮತ್ತು ಸಮಾಜವನ್ನು ಆರೋಗ್ಯವಾಗಿ ಇಡುವಲ್ಲಿ ಅವಳ ದೇಣಿಗೆ ಅಗಾಧ. ಸದ್ವಿಚಾರ, ಸಾಧನೆ, ಅಭಿವೃದ್ಧಿಯ ಕನಸು, ಗುರಿ ಇವುಗಳನ್ನು ಕುಟುಂಬದೊಳಗಿನ ಸದಸ್ಯರಿಗೆ ಕಟ್ಟಿಕೊಡುವವಳು ಮಹಿಳೆಯೇ. ಹಲವು ಕುಟುಂಬದ ಹಲವು ಸಮರ್ಥ ಮಹಿಳೆಯರು ಒಂದೇ ಸೂರಿನಡಿ ಸೇರಿದಾಗ ಮಹಿಳೆಯ ಶಕ್ತಿ, ಸಂಘಟನೆಯ ಶಕ್ತಿ ಹೆಚ್ಚುವುದಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸ್ನೇಹ, ಸಾಮರಸ್ಯ, ಸಂಬಂಧ, ಸದೃಢತೆಯೆಂಬ ಧ್ಯೇಯದೊಂದಿಗೆ ಮನ್ವಂತರವನ್ನು ಮುನ್ನಡೆಸೋಣ ಎಂದಿದ್ದಾರೆ.
Also read: ಗಮನಿಸಿ! ಮೇ 1ರಂದು ಸೊರಬ ಹಾಗೂ ಗ್ರಾಮಾಂತರದ ಈ ಭಾಗದಲ್ಲಿ ಕರೆಂಟ್ ಇರುವುದಿಲ್ಲ
ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ವೀರಮ್ಮ ಮಾತನಾಡಿ, ಇದೀಗ ಮಹಿಳೆಯರ ದೃಷ್ಠಿಕೋನ ಬದಲಾಗಿದೆ, ಚಿಂತನೆಯ ಹರಿವು ಹೆಚ್ಚಾಗಿದೆ. ಅಭಿವ್ಯಕ್ತಿಯ ನೆಲೆಯಲ್ಲಿ ಮುನ್ನಡೆದಿದೆ. ಪ್ರತಿಯೊಂದು ಮಹಿಳಾ ಸಂಘಟನೆಗೂ ಅದರದ್ದೇ ಆದ ಸಿದ್ದಾಂತದ ಚೌಕಟ್ಟಿನೊಳಗೆ ತಮ್ಮ ಸಂಸ್ಥೆಯನ್ನು ಆರಂಭಿಸಿಕೊಂಡು ಮುನ್ನಡೆಯುತ್ತವೆ. ಸ್ನೇಹವಿಲ್ಲದೆ ಸಮಾಹಜವಿಲ್ಲ ಸಮಾಜವಿಲ್ಲದೆ ಸ್ನೇಹವಿಲ್ಲ. ಸ್ನೇಹ-ಸೇವೆ ಎಲ್ಲವನ್ನು ಮೀರಿ ನಿಲ್ಲುವಂತದ್ದು. ನಿಮೆಲ್ಲರ ಮನೋಬಲದ ಸಾರಥ್ಯ ಮನ್ವಂತರಕ್ಕೆ ಇರಲಿ. ಸೇವೆ – ಸ್ನೇಹದ ಜೊತೆಗೆ ಆರ್ಥಿಕ ಬಲವನ್ನು ಪಡೆಯಲು ಸಹಕಾರ ತತ್ವದತ್ತಲೂ ನಿಮ್ಮ ಗಮನ ಹರಿಯಲಿ. ಸೇವೆ, ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಎಂಬ ಚೌಕಟ್ಟಿನಲ್ಲಿ ನಿಮ್ಮ ಸಂಘಟನೆ ಆರಂಭವಾಗಿದೆ. ಈ ಗುಂಪಿನ ಅಧ್ಯಕ್ಷೆಯಾಗಿ ಶ್ರೀರಂಜಿನಿ ದತ್ತಾತ್ರಿ ಎಲ್ಲರೊಂದಿಗೆ ಬೆರೆತು ಈ ಮನ್ವಂತರ ಮಹಿಳಾ ಮಂಡಲವನ್ನು ಮುನ್ನಡೆಸಬಲ್ಲರು ಎಲ್ಲರಿಗೂ ಶುವಾಗಲಿ ಎಂದು ಶುಭ ಹಾರೈಸಿದರು.
ಗೌರವ ಅಧ್ಯಕ್ಷೆ ಜಯಾ ಸುರೇಶ್‌ರವರು, ಪ್ರಸ್ತುತ ದಿನಗಳಲ್ಲಿ ಮಹಿಳೆ ಒಂದಲ್ಲ ಒಂದು ಸಂಘಟನೆಯಲ್ಲಿ ತೊಡಗಿಕೊಂಡೇ ಇರುತ್ತಾಳೆ. ಸಂಘಟನೆಗಳ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತಾ ಸಾಗುತ್ತಾಳೆ. ಆ ಮೂಲಕ ಅರ್ಥಪೂರ್ಣ ಬದಲಾವಣೆ ನೀಡುತ್ತಾಳೆ. ಬಹಳ ದಿನಗಳಿಂದ ಯೋಜಿಸಿದ್ದ ಮನ್ವತರ ಮಹಿಳಾ ಸಂಘಟನೆಯೂ ಅರ್ಥಪೂರ್ಣ ಕಾರ್ಯಗಳ ಮೂಲಕ ಮುನ್ನಡೆಯೋಣ ಈ ಸಂಘಟನೆಯ ಮೂಲಕ ನಡೆಸುವ ಯಾವುದೇ ಕಾರ್ಯಗಳಿಗೆ ಸದಾ ನನ್ನ ಬೆಂಬಲವಿರುತ್ತದೆ ಎಂದರು.
ಕಾರ್ಯದರ್ಶಿಯಾಗಿ ಸುಲೋಚನಾ ಮೂರ್ತಿ, ಜಂಟಿ ಕಾರ್ಯದರ್ಶಿಯಾಗಿ ಲತಾ ಸೋಮಶೇಖರ್, ಉಪಾಧ್ಯಕ್ಷರಾಗಿ ನೇತ್ರಾವತಿ ಮಂಜುನಾಥ್, ಖಜಾಂಚಿಯಾಗಿ ಉಷಾ ಸುದರ್ಶನ್ ನೇಮಿಸಲ್ಪಟ್ಟರು. ನಿರ್ಧೇಶಕರಾಗಿ ಬೃಂದಾ ಶಾನ್ ಭಾಗ್, ಅರ್ಚನಾ, ಇಂದುಹೆಗ್ಡೆ, ವಿದ್ಯಾ ಅಣ್ಣಪ್ಪ, ಗಂಗಾಂಭಿಕ, ಶ್ವೇತಾಸಂಪತ್ ರವರು ಆಯ್ಕೆಯಾದರು. ಸದಸ್ಯರಾಗಿ ಮೀರಾಕಾಮತ್, ಸವಿತಾ ವೆಂಕಟೇಶ್, ಅನ್ನಪೂರ್ಣ, ರತ್ನಮಲ್ಲಪ್ಪ, ಅಶ್ವಿನಿ, ಸಾವಿತ್ರಿ ಶಿವಸ್ವಾಮಿ, ವಿನಯಾ ಇಂದಿರೇಶ್, ಸ್ವಪ್ನ ಸುರೇಶ್, ವಿಜಯಾ ಹಾಲಸ್ವಾಮಿ, ವಿಜಯಾಶಿವು, ಅಶ್ವಿನಿ ಜಾದವ್, ಕುಸುಮ ಎಣ್ಣೇರ್, ಜ್ಯೋತಿವಾಸುದೇವ್, ಸೀತಾದೇವಿ, ರವಿ, ಇಂದಿರಾ ನಾಗರಾಜ್, ಸುಧಾ, ಗಾಯತ್ರಿ, ಹೆಗ್ಡೆ, ನಾಗರತ್ನ ನಾರಾಯಣ್, ಪುಷ್ಪ ಶಿವಣ್ಣ, ಲತಾ, ವಿನಯ, ವೀಣಾ ಮಂಜುನಾಥ್, ಶಶಿಕಲಾ, ಸಂಧ್ಯಾ ವಿನಯ್, ಸುವರ್ಣ, ಸುಜಾತ, ಆಶಾ, ಅಕ್ಷಯ, ಕವಿತಾ ವೆಂಕಟೇಶ್ ಹೀಗೆ50ಕ್ಕೂ ಹೆಚ್ಚು ಮಹಿಳೆಯರು ಮನ್ವಂತರ ಮಹಿಳಾ ಮಂಡಳದ ಸದಸ್ಯರಾದರು.
ಸುಲೋಚನಾ ಮೂರ್ತಿ ನಿರೂಪಿಸಿ, ಲತಾ ಸೋಮಶೇಖರ್ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post