ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರ ಕಲ್ಲಹಳ್ಳಿಯ ಸಿರಿ ಚಂದನ ಸೇವಾ ಸಂಸ್ಥೆ (ರಿ) ಕಲ್ಲಹಳ್ಳಿ ಇದರ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಕನ್ನಡ ಅಂದದ ಕೈಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತಾವು ಓದುತ್ತಿರುವ ಕನ್ನಡ ಭಾಷಾ ಪಠ್ಯಪುಸ್ತಕದ ಯಾವುದಾದರೊಂದು ಪಾಠದ ವಿಷಯವನ್ನು ಒಂದು ಪುಟಕ್ಕೆ ಮೀರದಂತೆ ಬರೆದು ಕಳುಹಿಸಬೇಕು.

ಗೀತ ಗೌಡರ್, ಮನೆ ನಂ. ಎಂಐಜಿ-184, ಕಲ್ಲಹಳ್ಳಿ, ವಿನೋಬನಗರ, ಶಿವಮೊಗ್ಗ-577 204 ಈ ವಿಳಾಸಕ್ಕೆ ಅಂಚೆ ಅಥವಾ ಖುದ್ದಾಗಿ ತಲುಪಿಸಲು ಕೋರಿದೆ. ವಿಜೇತರಿಗೆ ಪ್ರಮಾಣಪತ್ರ ಪುಸ್ತಕ ಹಾಗೂ ನಗದು ಬಹುಮಾನ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಮೊ. 9449573323, 7019173733 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post