ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನಷ್ಯತ್ವವನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮನೆಯ ಸದಸ್ಯನಿಗೆ ತೋರುವ ಪ್ರೀತಿ, ಅಭಿಮಾನವನ್ನು ಪ್ರಾಣಿಗಳಿಗೂ ನೀಡುತ್ತಿರುವ ಹೆಮ್ಮೆಯ ವಿಷಯ ಎಂದು ಮಾಜಿ ಜಿಪಂ ಸದಸ್ಯ ಕೆ.ಈ. ಕಾಂತೇಶ್ ಅಭಿಪ್ರಾಯಪಟ್ಟರು.
ನಗರದ ಚಂದ್ರಶೇಖರ ಆಜಾದ್ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಡಾಗ್ ಷೋಗೆ ಚಾಲನೆ ನೀಡಿ ಮಾತನಾಡಿದ ಅವರು, ಇಷ್ಟು ದೊಡ್ಡ ಮಟ್ಟದಲ್ಲಿ ನಾಯಿಗಳಿಗಾಗಿ ಪ್ರದರ್ಶನ ಆಯೋಜಿಸಿರುವುದು ಸಂತಸದ ವಿಷಯ. ೨೫೦ಕ್ಕೂ ಹೆಚ್ಚು ಶ್ವಾನಗಳು ಇಂದು ಇಲ್ಲಿಗೆ ಆಗಮಿಸಿದೆ. ನಾಯಿಗಳನ್ನು ಸಾಕುವ ಮನೋಭಾವ ಹೊಂದಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕೋತಿಯ ಹುಟ್ಟುಹಬ್ಬ ಆಚರಿಸಿದ ಮನೆಯವರಿಗೆ ಅಭಿನಂದನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post