ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಕಠಿಣ ಪರಿಶ್ರಮ ಮತ್ತು ತ್ಯಾಗಗಳನ್ನು ಸ್ಮರಿಸುತ್ತಾ ಶಾಲೆಗಳಲ್ಲಿ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳಸುವ ಜವಬ್ದಾರಿ ಶಿಕ್ಷಕರದ್ದಾಗಿದೆ ಎಂದು ಪಿಇಎಸ್ ಐಟಿಎಮ್ ಪ್ರಾಂಶುಪಾಲ ಡಾ. ಬಿ. ಎನ್. ಯುವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ #Republic day ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾರತ ಪ್ರಜಾಪ್ರಭುತ್ವ ಸ್ವೀಕರಿಸಿದ ದಿನ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಮುಖ್ಯವಾದ ದಿನವಾಗಿದೆ. ಮಕ್ಕಳು ನಮ್ಮ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯವನ್ನು ಗೌರವಿಸಬೇಕು ಎಂದರು.

Also read: ಯುವ ಜನತೆ ಬದ್ಧತೆಯಿಂದ ದೇಶಕ್ಕಾಗಿ ದುಡಿದಾಗ ಭಾರತ ಇನ್ನೂ ಉನ್ನತಿಗೇರಲು ಸಾಧ್ಯ: ಮೈಕಲ್ ಕ್ರಿಪ್ಸನ್ ಕರ್ಕಡ
ಈ ದಿನದ ಸವಿನೆನಪಿಗಾಗಿ ಪಿಇಎಸ್ ಸಮೂಹ ಸಂಸ್ಥೆಗಳ ಮಕ್ಕಳಿಂದ ಸಮಾನತೆ. ಬ್ರಾತೃತ್ವ ಮೌಲ್ಯವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಇಎಸ್ ಸಮೂಹ ಸಂಸ್ಥೆಯ ಪ್ರಾಂಶುಪಾಲರು, ಬೋಧಕ ವರ್ಗ, ಬೋಧೇಕತರ ವರ್ಗ ಎಲ್ಲರೂ ಉಪಸ್ಥಿತರಿದ್ದರು.
ಕುಮಾರಿ ಪೂರ್ವಿಕ ಮತ್ತು ಶ್ರೇಯಾ ಸ್ವಾಗತಿಸಿದರು, ಕುಮಾರಿ ಇಂಚರ ಮತ್ತು ಶ್ರೀಲಕ್ಷ್ಮೀ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕು. ಶ್ರೇಯಾ ವಂದನಾರ್ಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






Discussion about this post