ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯೆಯ ಜೊತೆಗೆ ನಮ್ಮ ಸಂಸ್ಕೃತಿಯ ಸಮ್ಮಿಲನವಾದಾಗ ಮಾತ್ರ ಬದುಕಿನಲ್ಲಿ ಪರಿಪೂರ್ಣತೆ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ಬುಧವಾರ ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯ ಕಾಲೇಜಿನ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಲಾ ವೈಭವ – 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜನರು ಬಳಸುವ ವಿವಿಧ ಭಾಷೆ, ಅನುಸರಿಸುವ ಧರ್ಮ, ಆಹಾರ ಪದ್ದತಿ, ಕಲೆ ಮತ್ತು ಸಂಗೀತ ಈ ನಾಲ್ಕು ವಿಭಿನ್ನತೆ ಸೇರಿದಾಗ ಜನ ಸಮೂಹದ ಸಂಸ್ಕೃತಿಯಾಗುತ್ತದೆ. ಅಂತಹ ವಿವಿಧತೆಗಳ ನಡುವೆ ಏಕತೆ ಸಾರುವ ಜೀವನ ಶೈಲಿಯನ್ನು ಯುವ ಸಮೂಹ ಬೆಳೆಸಿಕೊಳ್ಳಬೇಕಿದೆ. ಕಾಲೇಜಿನಲ್ಲಿ ಲಭ್ಯವಾಗುವ ವೇದಿಕೆಗಳು ಬದುಕಿನಲ್ಲಿ ಕೌಶಲ್ಯತೆಯನ್ನು ರೂಡಿಸಿಕೊಳ್ಳಲು ಸಾಧ್ಯವಾಗಲಿದ್ದು, ಭಾಗವಹಿಸುವಿಕೆ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಮಾತನಾಡಿ ಕಲಾ ವೈಭವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಹೊರಹೊಮ್ಮಲು ಪ್ರೇರಣಾ ಶಕ್ತಿಯಾಗಲಿದೆ. ಜೀವನದ ನಿಜವಾದ ಸವಾಲು ಎದುರಾಗುವುದು ವಿದ್ಯಾರ್ಥಿ ಜೀವನದ ನಂತರ. ಹಾಗಾಗಿಯೇ ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.
Also read: ಆತಂಕ ಮೂಡಿಸಿದ್ದ ಅನಾಮಧೇಯ ಪತ್ರ, ಸುಳ್ಳು ಪ್ರಕರಣವಾಗಿ ಅಂತ್ಯ! ಏನಿದು ಘಟನೆ?
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post