ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸೈನಿಕ ಪಾರ್ಕ್ ನಲ್ಲಿ ಜೆಸಿಐ ಶಿವಮೊಗ್ಗ ಸ್ಟಾರ್ಸ್ ಸಂಸ್ಥೆಯಿಂದ ಕಾರ್ಗಿಲ್ ವಿಜಯ್ ದಿವಸ್ ಮತ್ತು ಪಾರ್ಕ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಜೆಸಿಐ ಭಾರತದಿಂದ ಜ್ಯೂನಿಯರ್ ಜೇಸಿಸ್ ವೀಕ್ ನಿರಂತರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಹರಿವು ಮೂಡಿಸುವ ಕಾರ್ಯಕ್ರಮವು ಒಂದು. ಹಾಗೇ ಕಾರ್ಗಿಲ್ ವಿಜಯ ದಿವಸ್ ಆಚರಣೆ ಪ್ರಯುಕ್ತ ಸೈನಿಕ ಪಾರ್ಕ್ ನಲ್ಲಿ ವಿಜಯ್ ದಿವಸ ಆಚರಣೆಯ ಜೊತೆ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿ, ನಮ್ಮ ತಂಡದ ಜೊತೆ ಗೊ ಗ್ರೀನ್ ಸಂಸ್ಥೆ ಸಹ ಕೈ ಜೋಡಿಸಿದೆ.
ಜ್ಯೂನಿಯರ್ ಜೇಸಿಸ್ ವೀಕ್’ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ, ಮಕ್ಕಳಿಗೆ ವಿವಿಧ ಸ್ಪರ್ಧಾ ಚಟುವಟಿಕೆ, ಪರಿಸರದ ಬಗ್ಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ, ಶಿಕ್ಷಕರಿಗೆ ಸನ್ಮಾನ, ಮತ್ತು ಪ್ರಾಮಾಣಿಕತೆಯ ಬಗ್ಗೆ ಹರಿವು ಮೂಡಿಸುವ ದೃಷ್ಟಿಯಿಂದ ಪ್ರಾಮಾಣಿಕ ವ್ಯಾಪಾರದ ಬಗ್ಗೆ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಮಾಡಿದೇವೆಂದು, ಜೆಸಿಐ ಶಿವಮೊಗ್ಗ ಸ್ಟಾರ್ಸ್ ನ ಅಧ್ಯಕ್ಷರಾದ ಜೆಸಿ ಅಶ್ವಿನಿ ಚಂದ್ರಶೇಖರ್ ಮಾಹಿತಿ ನೀಡಿದರು.
Also read: ಅರಣ್ಯ ಸಂರಕ್ಷಣೆ ಕಾಯ್ದೆ 2023 ಜಾರಿಯಾದಲ್ಲಿ ಭಾರೀ ಪ್ರಮಾಣದ ಅರಣ್ಯ ನಾಶ ಸಾಧ್ಯತೆ
ಈ ಸಂದರ್ಭದಲ್ಲಿ ಗೋ ಗ್ರೀನ್’ನ ಜೆಸಿ ವಿಜಯ ಲಕ್ಷ್ಮಿ, ಜೆಸಿ ಕಿಶನ್, ಜೆಸಿ ಕಾರ್ಣಿಕ, ಜೆಸಿ ನವೀನ್ ತಲಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post