ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ನ ನೂತನ ಶಿವಮೊಗ್ಗ ಜಿಲ್ಲಾ ಘಟಕವೂ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಅಮೆಚೂರ್ ಅಸೋಸಿಯೇಷನ್‍ನ ಸಬ್ ಕಮಿಟಿ ಸದಸ್ಯರಾದ ಎಂ ಶ್ರೀಕಾಂತ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದರು .
ರಾಜ್ಯಸಮಿತಿಯ ಸೂಚನೆ ಮೇರೆಗೆ ಜಿಲ್ಲಾ ಕಬ್ಬಡಿ ಅಸೋಸಿಯೇಷನ್ ರಚಿಸಲಾಗಿದ್ದು, ಇದರ ಅಧ್ಯಕ್ಷರಾಗಿ ಬಿ.ಸಿ ಚಂದ್ರಶೇಖರ್, ಪ್ರಧಾನಕಾರ್ಯದರ್ಶಿಯಾಗಿ ಅನಿಲ್ ಕುಮಾರ್. ಖಜಾಂಚಿಯಾಗಿ ಸಿದ್ದಯ್ಯ ಎಸ್.ಎನ್. ಉಪಾಧ್ಯಕ್ಷರಾಗಿ ಕೆ.ಎಸ್ ಶಶಿ .ಎಂ .ವಿನಯ್, ಸಹಕಾರ್ಯದರ್ಶಿಗಳಾಗಿ ಲಕ್ಷ್ಮಿನಾರಾಯಣ ಡಿ.ಬಿ, ಮರುಳಸಿದ್ದಸ್ವಾಮಿ ಎಂ ಜಿ, ಸದಸ್ಯರಾಗಿ ರಮೇಶ್ ಡಿ., ಸಂಘಟನಾಕಾರ್ಯದರ್ಶಿಯಾಗಿ ಮೈಕಲ್ ಕಿರಣ್ ಅವರುಗಳನ್ನು ಆಯ್ಕೆಮಾಡಲಾಗಿದೆ ಎಂದು ತಿಳಿಸಿದರು.
ದೇಶಿ ಕ್ರಿಡೆ ಕಬ್ಬಡಿಯನ್ನು ಜಿಲ್ಲೆಯಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಬ್ಬಡಿ ಪಂದ್ಯಾವಳಿಗಳನ್ನು ಏರ್ಪಡಿಸುವುದು, ಅದಕ್ಕೆ ಪೂರಕವಾದ ತರಬೇತಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ತಂಡಗಳನ್ನು ಸಿದ್ದಪಡಿಸಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕಳುಹಿಸುವ ಉದ್ದೇಶ ಹೊಂದಲಾಗಿದೆ.
Also read: ಸಂಭ್ರಮ ಸಡಗರದ ರಂಜಾನ್ ಆಚರಣೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ
ಈಗಾಗಲೆ ಶಿವಮೊಗ್ಗದಲ್ಲಿ ಕಬ್ಬಡಿ ಆಟಕ್ಕೆ ಉತ್ತಮ ವಾತಾವರಣವಿದ್ದು, ನಾಲ್ಕು ಜನರು ರಾಷ್ಟ್ರಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಕ್ರೀಡೆಯಿಂದ ಉದ್ಯೋಗವಕಾಶವೂ ಲಭಿಸಲಿದ್ದು, ಬ್ಯಾಂಕ್ ಮತ್ತಿತರ ಸರ್ಕಾರಿ ಸೇವೆಗಳಲ್ಲಿ ಕ್ರೀಡಾ ಮೀಸಲಾತಿಯಲ್ಲಿ ಉದ್ಯೋಗ ಸಿಗಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪದಾಧಿಕಾರಿಗಳಿದ್ದರು. ಇದೇ ಸಂದರ್ಭದಲ್ಲಿ ಎಂ.ಶ್ರೀಕಾಂತ್ ಅವರನ್ನು ನೂತನ ಸಮಿತಿಯು ಸನ್ಮಾನಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post