ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರಭಕ್ತರ ಬಳಗದಿಂದ ಕಾಶಿಯಾತ್ರೆ #Kashi Yatra ಮತ್ತು ಅಯೋಧ್ಯ #Ayodhya ಯಾತ್ರೆಯನ್ನು ಏರ್ಪಡಿಸಲಾಗಿದ್ದು, ನ.23ರ ಬೆಳಗ್ಗೆ 6 ಗಂಟೆಗೆ ಶಿವಮೊಗ್ಗದಿಂದ ವಿಶೇಷ ರೈಲು ಹೊರಡಲಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ರಾಷ್ಟ್ರಭಕ್ತರ ಬಳಗದ #Rashtra Bhakthara Balaga ಮುಖಂಡ ಮಹಾಲಿಂಗಶಾಸ್ತ್ರಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನ.23ರ ಬೆಳಿಗ್ಗೆ 6.15 ಕ್ಕ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ವಿಶೇಷವಾದ ರೈಲಿಗೆ ಬೆಕ್ಕಿನಕಲ್ಮಠ ಸ್ವಾಮಿಗಳು, ಬಸವ ಮರುಳಸಿದ್ದ ಸ್ವಾಮಿಗಳು, ಸಾಯಿನಾಥ್ ಸ್ವಾಮಿಜಿಗಳು ಧ್ವಜ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಒಟ್ಟು 1500 ಜನರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, 24 ಭೋಗಿಗಳಲ್ಲಿ ಸಂಚರಿಸಲಿದ್ದೇವೆ ಎಂದರು.
ನ.23 ರಿಂದ ಶಿವಮೊಗ್ಗದಿಂದ ಯಾತ್ರೆ ಹೊರಡಲಿದ್ದು, 48 ಗಂಟೆ ಪ್ರಯಾಣ ನಡೆಸಿ, ನ.25 ರ ಬೆಳಗ್ಗೆ 10ಗಂಟೆಗೆ ಅಯೋಧ್ಯ ತಲುಪಲಿದ್ದೇವೆ. ನ.26 ಕ್ಕೆ ಕಾಶಿ ತಲುಪಲಿದ್ದು, ಕಾಶಿ ಜಗದ್ಗುರುಗಳು ಯಾತ್ರಾರ್ಥಿಗಳಿಗೋಸ್ಕರ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
Also read: ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ದಿನಾಂಕ ಫಿಕ್ಸ್
ಕಾಶಿ ಜಗದ್ಗುರು ನೇತೃತ್ವದಲ್ಲಿ ಮಣಿಕಂಟ ಘಾಟು ತಲುಪಲಿದ್ದೇವೆ. ಧ್ಯಾನ ಭಜನೆ ಸೇರಿದಂತೆ ಎರಡು ದಿನಗಳ ಕಾಲ ಕಾಶಿಯಲ್ಲಿ ತಂಗಲಿದ್ದೇವೆ. ಕಾಶಿ ವಿಶ್ವನಾಥ, ವಿಶಾಲಾಕ್ಷಿ ದರ್ಶನ ಮಾಡಿ, ನ.27 ರಂದು ಅಲ್ಲಿಂದ ಹೊರಟು ನ.29 ರ ರಾತ್ರಿ ಶಿವಮೊಗ್ಗ ತಲುಪಲಿದ್ದೇವೆ ಎಂದು ತಿಳಿಸಿದರು.
ಒಟ್ಟಾರೆ ಯಾತ್ರೆಗೆ 7,500 ರೂ. ಶುಲ್ಕವಿದ್ದು, ಯಾತ್ರೆ ಸಮಯದ ಇತ್ಯಾದಿ ಖರ್ಚುಗಳನ್ನು ರಾಷ್ಟ್ರ ಭಕ್ತ ಬಳಗದ ವತಿಯಿಂದ ಭರಿಸಲಾಗುತ್ತಿದೆ. ವಿಶೇಷ ರೈಲನ್ನು ಹೊರತುಪಡಿಸಿ ಯಾತ್ರಾ ಸಲುವಾಗಿಯೇ 300 ಆಟೋಗಳು ಹಾಗೂ 100 ಜೀಪ್‍ಗಳ ವ್ಯವಸ್ಥೆ ಮಾಡಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಎಂ.ಶಂಕರ್, ಬಾಲು, ಮಾಂಡೇನಕೊಪ್ಪ ಗಂಗಾಧರ್, ಮೋಹನ್, ಈ.ವಿಶ್ವಾಸ್, ಶಿವಾಜಿ ಸೇರಿದಂಯತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post