ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಕೃಷಿ ಮೇಳ #KrishiMela2025 ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದಿದೆ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮೇಳಕ್ಕೆ ಚಾಲನೆ ನೀಡಿದ್ದು, ಕೃಷಿ ಕ್ಷೇತ್ರದ ವೈಭವದ ಪರಂಪರೆ ಹಾಗೂ ಕೃಷಿ ಸಂಬಂಧಿತ ತಂತ್ರಜ್ಞಾನ ಅನಾವರಣಗೊಂಡಿದೆ.
ಪ್ರಮುಖವಾಗಿ, ಮೊದಲ ದಿನವೇ ಕೃಷಿ ಮೇಳಕ್ಕೆ ಸುಮಾರು 45 ರಿಂದ 50 ಸಾವಿರ ರೈತರು ಭೇಟಿ ನೀಡಿರುವುದು ಅತ್ಯಂತ ವಿಶೇಷವಾದ ಸಂಗತಿಯಾಗಿದೆ.
ವಿದ್ಯಾರ್ಥಿಗಳ ಭೇಟಿ
ಇನ್ನು, ಕೃಷಿ ಮೇಳಕ್ಕೆ ಇಂದು ನೂರಾರು ವಿದ್ಯಾರ್ಥಿಗಳು ಭೇಟಿ ಕೊಟ್ಟು ಕೃಷಿ ಸಂಬಂಧಿತ ಮಾಹಿತಿ ಪಡೆದುಕೊಳ್ಳುವ ಜೊತೆಯಲ್ಲಿ, ಸಾಂಪ್ರದಾಯಿಕ ಆಟಗಳನ್ನೂ ಸಹ ಆಡಿ ಸಂಭ್ರಮಿಸಿದರು.
ಮೇಳದ ಮಾಹಿತಿ ಕೇಂದ್ರಗಳಿಗೆ ತೆರಳಿದ ವಿದ್ಯಾರ್ಥಿಗಳು ಕೃಷಿ ಸಂಬಂಧಿತ ಬೀಜಗಳ ಉಪಕರಣಗಳ ಕೃಷಿ ಬೆಳೆಗಳ ಕೃಷಿ ಅರಣ್ಯ ಸಾಂಪ್ರದಾಯಿಕ ಕ್ರೀಡೆಗಳ ವಿವಿಧ ಮಾಹಿತಿಗಳನ್ನ ಪಡೆದುಕೊಂಡರು.
ಕೃಷಿಯನದಲ್ಲಿರುವ ಸಾಂಪ್ರದಾಯಿಕ ಕ್ರೀಡೆಗಳಾದ ಲಗೋರಿ, ಬುಗುರಿ, ಚಿನ್ನಿದಾಂಡು, ಕುಂಟೆಪಿಲ್ಲೆ, ಮರಕೋತಿ ಆಟ, ಜೋಕಾಲಿ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಿ ಆನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post