ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ Kuvempu University ಅಧಿಕೃತ ವೆಬ್’ಸೈಟನ್ನು ಕಳೆದ ರಾತ್ರಿ ಹ್ಯಾಕ್ ಮಾಡಲಾಗಿದ್ದು, ಈ ಕುರಿತಂತೆ ದೂರು ನೀಡಲು ಸಿದ್ದತೆ ನಡೆದಿದೆ.
ಪ್ರೋ ಪ್ಯಾಲೆಸ್ಟೈನ್’ನಿಂದ ಕುವೆಂಪು ವಿವಿ ವೆಬ್ ಸೈಟನ್ನು ಹ್ಯಾಕ್ ಮಾಡಿದೆ ಎಂದು ತಿಳಿದುಬಂದಿದೆ.
ಕಲೀಮ ಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಮ್ ಹ್ಯಾಕ್ ಮಾಡಲಾಗಿರುವ ಹ್ಯಾಕರ್ಸ್ ಸೇವ್ ಪ್ಯಾಲೆಸ್ಟೈನ್ – ಇಸ್ರೇಲ್ ಡಾಗ್ ಎಂದು ವೆಬ್ ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
Also read: ಶಿವಮೊಗ್ಗ | ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ | ಮೂವರು ಯುವತಿಯರ ರಕ್ಷಣೆ
ವೆಬ್ ಸೈಟ್ ಹ್ಯಾಕ್ ಆದ ವಿಷಯ ತಿಳಿದಾಕ್ಷಣ ವಿವಿಯ ತಾಂತ್ರಿಕ ಸಮಿತಿ ಸೈಟನ್ನು ಸ್ಥಗಿತಗೊಳಿಸಿ, ಮರುಸ್ಥಾಪಿಸುವ ಕೆಲಸವನ್ನು ಆರಂಭಿಸಿದೆ.
ಇನ್ನು, ವಿವಿ ವತಿಯಿಂದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಸಿದ್ದತೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post