ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದ್ವೈತ, ಅದ್ವೈತ ಹಾಗೂ ವಿಶಿಷ್ಟಾದ್ವೈತ ಸಿದ್ದಾಂತಗಳ ಕುರಿತಾಗಿ ನ.21ರ ನಾಳೆಯಿಂದ ಮೂರು ದಿನಗಳ ಕಾಲ ಗೀತ ರೂಪಕ ಮತ್ತು ವಿಶೇಷ ಉಪನ್ಯಾಸ ನಡೆಯಲಿದೆ.
ನ.21ರ ನಾಳೆ ಸಂಜೆ 6 ಗಂಟೆಗೆ ಶ್ರೀ ಶಂಕರಾಚಾರ್ಯ ವಿರಚಿತ `ಜಾಗ್ರತ ಪಂಚಕಂ’ ಹಾಗೂ `ಭಜಗೋವಿಂದಂ`(ಮೋಹಮುದ್ಗರಃ) ಗಾಯನ ಮತ್ತು ವಿಶ್ಲೇಷಣೆ ಕೊಪ್ಪದ ಶ್ರೀ ಹರಿಹರನಾಮ ಸ್ಮರಣ ತಂಡದಿಂದ ನಡೆಯಲಿದೆ.
ನ.22ರಂದು ಸಂಜೆ 6 ಗಂಟೆಗೆ ಶಿವಮೊಗ್ಗ ಶ್ರೀ ರಘೋತ್ತಮಾಚಾರ್ ಅವರಿಂದ ಶ್ರೀ ಮಧ್ವಾಚಾರ್ಯರ ಸಂದೇಶ ಮತ್ತು ದ್ವೈತ ಸಿದ್ದಾಂತ ಕುರಿತಾಗಿ ಉಪನ್ಯಾಸ, ನ.23ರಂದು ಸಂಜೆ 6 ಗಂಟೆಗೆ ಮೇಲುಕೋಟೆಯ ಪ್ರಾಧ್ಯಾಪಕರಾದ ಶ್ರೀಮತಿ ರಮಾ ಶ್ರೀನಿವಾಸನ್ ಅವರಿಂದ ಶ್ರೀ ರಾಮಾನುಜಾಚಾರ್ಯರ ಸಂದೇಶ ಮತ್ತು ವಿಶಿಷ್ಠಾದ್ವೈತ ಸಿದ್ದಾಂತ ಕುರಿತಾಗಿ ಉಪನ್ಯಾಸ ನಡೆಯಲಿದೆ.
Also read: ಪೌರ ಸೇವಾ ನೌಕರರ ಭದ್ರಾವತಿ ಅಧ್ಯಕ್ಷರಾಗಿ ಚೇತನ್ ಕುಮಾರ್ ಆಯ್ಕೆ
ರಾಮತಾರಕ ಜಪ ಯಜ್ಞ ಸಮಿತಿ ವತಿಯಿಂದ ನ.21ರ ಸಂಜೆ 4.30ಕ್ಕೆ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಸಮಾಲೋಚನಾ ಸಭೆ ನಡೆಯಲಿದ್ದು, ನಗರದ ಎಲ್ಲ ಸಂಘ, ಸಂಸ್ಥೆ, ಸಂಘಟನೆ, ಯೋಗಕೇಂದ್ರ, ಭಜನಾಮಂಡಳಿಗಳ ಪ್ರಮುಖರು ಪಾಲ್ಗೊಳ್ಳಬೇಕಾಗಿ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post