ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಭಾಷೆಯನ್ನು ನಾಡಿನ ಪ್ರತಿಯೊಬ್ಬರು ಹೆಚ್ಚಾಗಿ ಬಳಸಬೇಕು. ನಮ್ಮೆಲ್ಲರ ಜೀವನದಲ್ಲಿ ನಿತ್ಯೋತ್ಸವವಾಗಲಿ ಕನ್ನಡ, ಕನ್ನಡವೇ ನಮ್ಮ ಉಸಿರು, ಕನ್ನಡದಲ್ಲೇ ಮಾತನಾಡೋಣ ಎಂದು ಯೋಗ ಶಿಕ್ಷಕ ಜಿ.ಎಸ್. ಓಂಕಾರ್ ಹೇಳಿದರು.
ನಗರದ ಕುವೆಂಪು ರಸ್ತೆಯ ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘದ ರಾಘವ ಸಭಾಂಗಣದಲ್ಲಿ ಶ್ರೀ ಶಿವಗಂಗಾ ರಾಘವ ಯೋಗ ಶಾಖೆ ಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ Kannada Rajyothsava ಸಂಭ್ರಮದಲ್ಲಿ ಮಾತನಾಡಿ, ಕನ್ನಡವ ಕಲಿಸೋಣ, ಉಳಿಸೋಣ, ಬೆಳೆಸೋಣ. ಕನ್ನಡವೇ ನಮ್ಮ ಪ್ರಾಣವಾಗಲಿ, ಅನ್ಯ ಭಾಷೆಯ ಪ್ರಭಾವ ಕನ್ನಡದ ಮೇಲೆ ಬೀರದಂತೆ ನಾವೆಲ್ಲ ಎಚ್ಚರ ವಹಿಸೋಣ ಎಂದು ತಿಳಿಸಿದರು.
ಶ್ರೀ ಶಿವಗಂಗಾ ರಾಘವ ಯೋಗ ಶಾಖೆಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ ಆಚರಿಸಿ ತಾಯಿ ಭುವನೇಶ್ವರಿಗೆ ಸೂರ್ಯ ನಮಸ್ಕಾರದ ಮೂಲಕ ಯೋಗಾರತಿ ಬೆಳಗಿ ಧ್ವಜ ವಂದನೆ ಸಲ್ಲಿಸಿ ನಂತರ ಸಾಮೂಹಿಕವಾಗಿ ನಾಡಗೀತೆ ಹಾಡಲಾಯಿತು.
Also read: ಕನ್ನಡ ಬಳಸಿ ನಾಡಿನ ಪರಂಪರೆ ಉಳಿಸಿ: ತಹಶೀಲ್ದಾರ್ ಎಚ್.ಎ. ಸರಕಾವಸ್ ಕರೆ
ಕರ್ನಾಟಕ ಸರ್ಕಾರದ ಘೋಷವಾಕ್ಯವಾದ ಕರ್ನಾಟಕ ಸಂಭ್ರಮ 50, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ವಾಕ್ಯಗಳನ್ನು ಒಕ್ಕೊರಲಿನಿಂದ ಹೇಳಲಾಯಿತು. ಶ್ರೀ ಶಿವಗಂಗಾ ಯೋಗ ಕೇಂದ್ರದ ಕಾರ್ಯಾಧ್ಯಕ್ಷ ಯೋಗ ಆಚಾರ್ಯ ಸಿ. ವಿ.ರುದ್ರಾರಾಧ್ಯರ ಪರವಾಗಿ ಸಾರ್ವಜನಿಕರಿಗೆ ಮತ್ತು ಯೋಗ ಶಿಕ್ಷಣಾರ್ಥಿಗಳೆಲ್ಲರಿಗೂ ಶುಭಾಶಯ ತಿಳಿಸಲಾಯಿತು.
ಸಂಭ್ರಮದಲ್ಲಿ ಯೋಗ ಶಿಕ್ಷಣಾರ್ಥಿಗಳೊಂದಿಗೆ ಶಿಕ್ಷಕ ಜಿ.ಎಸ್.ಓಂಕಾರ್, ವಿಜಯ ಕೃಷ್ಣ ವೈ.ಎಸ್, ಹರೀಶ್, ನರಸೂಜಿ ರಾವ್, ಸುಜಾತ ಮಧುಕೇಶ್ವರ್, ಗಾಯತ್ರಿ ಅಶೋಕ್, ಯೋಗ ಸಾಧಕ ಜಿ.ವಿಜಯಕುಮಾರ್, ಜಿ.ಎಸ್.ಜಗದೀಶ್, ಮಹೇಶ್, ಆನಂದ್, ಸುಬ್ರಮಣಿ, ಅರುಣ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post