ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಸ್ಪರ್ಧಿಸಲಿ. ಅವರನ್ನು ಸೋಲಿಸಿದೆ ಎಂಬ ಕೀರ್ತಿ ನನಗೇ ಬರಲಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಇಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವ ಲಾಜಿಕ್ಕೂ ಇಲ್ಲ. ಪ್ರಧಾನಿಯಂತವರನ್ನು ಟೀಕಿಸುವುದು ಬಿಟ್ಟರೆ ಅವರಿಗೆ ಏನೂ ಕೆಲಸವಿಲ್ಲ. ಅವರಿಗೆ ರಾಜ್ಯದಲ್ಲಿ ಸ್ಪರ್ಧಿಸಲು ಎಲ್ಲೂ ಸ್ಥಳವೂ ಇಲ್ಲ. ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲುವುದೂ ಇಲ್ಲ. ಅವರು ಕೋಲಾರದಲ್ಲಿ ಸ್ಪರ್ಧಿಸಿದರೆ ಗೆಲ್ಲುವುದೂ ಇಲ್ಲ. ಅಲೆಮಾರಿಯಂತೆ ಇರುವ ಸಿದ್ದರಾಮಯ್ಯ ಬೇಕಾದರೆ ಶಿವಮೊಗ್ಗ ಕ್ಷೇತ್ರಕ್ಕೆ ಬರಲಿ ಅವರನ್ನು ಸೋಲಿಸಿದೆ ಎಂಬ ಕೀರ್ತಿ ನನಗೂ ಮತ್ತು ಬಿಜೆಪಿ ಪಕ್ಷಕ್ಕಿರುತ್ತದೆ ಎಂದರು.

ಇದೇ ಸಿದ್ದರಾಮಯ್ಯ ಮುನಿಯಪ್ಪನನ್ನು ಸೋಲಿಸಿದರು. ಖರ್ಗೆ ಸೋಲಿಗೂ ಕಾರಣರಾದರು, ಶ್ರೀನಿವಾಸ ಪ್ರಸಾದ್ ಅವರನ್ನು ಹೊರಗೆ ತಳ್ಳಿದರು. ಇವರಲ್ಲಿ ನಾಯಕರು ಯಾರೂ ಇಲ್ಲ ಮೋದಿ ಹೆಸರು ಹೇಳಿಕೊಂಡು ಬಿಜೆಪಿಯವರು ವೋಟು ಕೇಳುತ್ತಿದ್ದಾರೆ ಎಂದು ಇವರು ದೂರುತ್ತಾರೆ. ಆದರೆ ಇವರಿಗೆ ರಾಷ್ಟ್ರೀಯ ನಾಯಕರೂ ಇಲ್ಲ. ರಾಜ್ಯ ನಾಯಕರೂ ಇಲ್ಲ. ಬಿಜೆಪಿಯಲ್ಲಿ ಸುಮಾರು 50ಕ್ಕೂ ಹೆಚ್ಚು ನಾಯಕರು ಸಿಗುತ್ತಾರೆ ಎಂದು ತಿರುಗೇಟು ನೀಡಿದರು.

ರಾಜ್ಯ ನಾಯಕರುಗಳು, ಆಯಾ ಭಾಗದ ಸಂಸದರು, ರಾಜ್ಯ ಪದಾಧಿಕಾರಿಗಳು ಶಾಸಕರು, ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಮಾ.25ರಂದು ದಾವಣಗೆರೆಯಲ್ಲಿ ನಡೆಯುವ ಸಮಾವೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಆಗಮಿಸುವರು ಎಂದರು.











Discussion about this post