ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಕಾರ್ಯಕರ್ತ ಹರ್ಷನ #Harsha murder ಕೊಲೆ ಪ್ರಕರಣ ತನಿಖೆ ರಾಷ್ಟ್ರೀಯ ತನಿಖಾ ದಳದಿಂದ ಆಗಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ #Minister Eshwarappa ಆಗ್ರಹಿಸಿದ್ದಾರೆ.
Read also: ಹಿಂದೂ ಕಾರ್ಯಕರ್ತರು ಆತಂಕ ಪಡಬೇಕಿಲ್ಲ, ಅವರ ಬೆಂಬಲಕ್ಕೆ ನಾವಿದ್ದೇವೆ: ಸಚಿವ ಸುಧಾಕರ್
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹರ್ಷನ ಹತ್ಯೆ ಹಾಗೂ ಅನಂತರ ಇಂದು ನಡೆದ ಗಲಭೆಯ ಹಿಂದೆ ಅಂತರಾಷ್ಟ್ರೀಯ ಮಟ್ಟದ ಷಡ್ಯಂತ್ರ ಇರುವಂತಿದೆ. ಗಲಾಟೆ ನಡೆಸಿ ಶಾಂತಿ ಕದಡಲು ಹೊರಗಡೆಯಿಂದ ನಗರಕ್ಕೆ ಕಿಡಿಗೇಡಿಗಳು ಆಗಮಿಸಿದ್ದಾರೆ ಎಂಬ ಸಂದೇಹ ಇದೆ. ಈ ವಿಚಾರಗಳು ಹೊರಬರಬೇಕೆಂದರೆ ಎನ್‌ಐಎ #NIA ತನಿಖೆಯಾಗಬೇಕು. ಹೀಗಾಗಿ ನಾಳೆ ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ #CM Basavaraja Bommai ಅವರೊಂದಿಗೆ ಚರ್ಚಿಸಿ ಮನವಿ ಮಾಡುತ್ತೇನೆ ಎಂದರು.
ಇಂದು ನಡೆದ ಗಲಭೆ ಹಿಂದೆ ಹಲವು ಸಂಘಟನೆಗಳ ಕೈವಾಡದ ಶಂಖೆ ವ್ಯಕ್ತವಾಗಿದೆ. ನಗರದಲ್ಲಿರುವ ಮುಸಲ್ಮಾನರಿಗೆ ಒಂದಷ್ಟು ಭಯವಿದೆ. ಹೀಗಾಗಿ ನಗರದಲ್ಲಿ ಇಂದು ನಡೆದ ಕಲ್ಲು ತೂರಾಟ, ಬೆಂಕಿ ಹಚ್ಚಿದಂತಹ ಕೃತ್ಯಗಳನ್ನು ಹೊರಗಿನಿಂದ ಬಂದ ಕಿಡಿಗೇಡಿಗಳು ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post