ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾದು ನೋಡಿ, ಗೀತಾ ಅವರು ಮೇ 7 ರಂದು ಅಥವಾ ಜೂನ್ 4ರಂದು ಮನೆಯನ್ನು ಖಾಲಿ ಮಾಡುತ್ತಾರೆ ಎಂದು ಕುಮಾರ್ ಬಂಗಾರಪ್ಪ #Kumar Bangarappa ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗೀತಾ ಶಿವರಾಜ್ ಕುಮಾರ್ #Geetha Shivarajkumar ಓಟು ಕೂಡ ಇಲ್ಲಿ ಇಲ್ಲ. ಇಂತಹ ಕಾಲದಲ್ಲೂ ಅವರು ತಮ್ಮ ಓಟನ್ನು ಸೊರಬಕ್ಕೆ ವರ್ಗಾಯಿಸಿಕೊಳ್ಳಬಹುದಿತ್ತು. ಅದೇ ಪ್ರತಿ ಬಾರಿಯೂ ಅಲ್ಲೇ ಓಟು ಹಾಕಿ ಬರುತ್ತಾರೆ ಎಂದರು.

Also read: ಗೀತಾ ಹೆಸರು ಹೇಳುವ ಯೋಗ್ಯತೆ ಹಾಲಪ್ಪ ಅವರಿಗಿಲ್ಲ | ಮಧು ಬಂಗಾರಪ್ಪ ವಾಗ್ದಾಳಿ
ರಾಜಕುಮಾರ್ #Rajkumar ಅವರ ಹೆಸರನ್ನು ಶಿವರಾಜ್ ಕುಮಾರ್ #Shivarajkumar ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರಿಗೂ ಚುನಾವಣೆಗೆ ನಿಲ್ಲುವ ಆಸೆ ಇತ್ತು ಎಂದು ಸುಳ್ಳು ಹೇಳುತ್ತಾರೆ. ಅವರ ಹೆಸರನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುವುದು ಎಷ್ಟು ಸರಿ. ರಾಜ್ ಕುಮಾರ್ ಮಾಡಿದ್ದು ಕಲಾಸೇವೆ. ಇವರು ಮಾಡುತ್ತಿರುವುದು ಏನು? ಶಿವರಾಜ್ ಕುಮಾರ್ ಅವರು ನನಗೆ ಇಡೀ ಚಿತ್ರರಂಗವೇ ನನ್ನ ಪರ ಇದೇ ಎಂದು ಹೇಳುತ್ತಾರೆ. ಆದರೆ ಅಲ್ಲಿರುವವರು ಕೆಲವರು ಮಾತ್ರ. ನಟ, ನಟಿಯರು ಪ್ರಚಾರ ಮಾಡಿದರೆ ಓಟು ಬರುತ್ತದೆ ಎನ್ನುವುದು ಸುಳ್ಳು. ಶಿವರಾಜ್ ಕುಮಾರ್ ಬೀದಿಯಲ್ಲಿ ಡ್ಯಾನ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹರಿಹಾಯ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post