ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚುನಾವಣೆ ಎಂಬುದು ಕುರುಕ್ಷೇತ್ರ. ಇಲ್ಲಿ ಅಣ್ಣ, ತಮ್ಮ, ಸಂಬಂಧಿಕರು ಎಂಬ ಬೇಧವಿಲ್ಲ. ಅವರನ್ನೇ ಎದುರಿಸಬೇಕಾದುದು ಅನಿವಾರ್ಯ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ #Kumar Bangarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧು ಬಂಗಾರಪ್ಪ ನನ್ನ ತಮ್ಮ, ಗೀತಾ #Geetha ನನ್ನ ಸಹೋದರಿ. ಶಿವರಾಜ್ ಕುಮಾರ್ #Shivarajkumar ನನ್ನ ಭಾವ ಎಂಬುದು ನಿಜ. ಆದರೆ, ಚುನಾವಣೆ ಎಂಬ ಕಣದಲ್ಲಿ ಈ ಭಾವನೆಗಳು ಇರುವುದಿಲ್ಲ. ಮುಖ್ಯವಾಗಿ ನನ್ನ ತಮ್ಮ ಎಂದು ನಾನು ಅಂದುಕೊಳ್ಳುತ್ತೇನೆ. ಆದರೆ ಆತ ದ್ವೇಷದ ರಾಜಕಾರಣ ಮಾಡುತ್ತಿದ್ದಾನೆ. ಒಂದು ಕುಟುಂಬವನ್ನು ಪ್ರೀತಿಸದವನು ರಾಜ್ಯದ ಜನರನ್ನು ಹೇಗೆ ಪ್ರೀತಿಸುತ್ತಾನೆ ಎಂದು ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಮಧು #Madhu Bangarappa ಅವರ ಬಗ್ಗೆ ಈಗಾಗಲೇ ಈ ಹಿಂದೆಯೇ ಸಾಕಷ್ಟು ಹೇಳಿದ್ದೇನೆ. ಚೆಕ್ ಬೌನ್ಸ್ ಪ್ರಕರಣ, ಶರಾವತಿ ಡೆಂಟಲ್ ಕಾಲೇಜ್ ಹಗರಣ ಇವೆಲ್ಲವೂ ಆತನನ್ನು ಸುತ್ತಿಕೊಂಡಿವೆ. ದುರಹಂಕಾರವೇ ಆತನ ಆಸ್ತಿ. ಉರಿಯುವವನು ಒಂದು ದಿನ ಬೂದಿಯಾಗುತ್ತಾನೆ. ಇಲ್ಲವೇ ಆವಿಯಾಗಿ ಬಿಡುತ್ತಾನೆ. 20ಕ್ಕೆ ಅವನಿಗೆ ನಮ್ಮ ತಂದೆ ಯಜಮಾನಿಕೆ ಕೊಟ್ಟು ಬಿಟ್ಟರು. ಆಗ ನಾನು ಬ್ಯುಸಿಯಾಗಿದ್ದೆ. ಆ ಸೊಕ್ಕು ಅವನಲ್ಲಿದೆ. 20ಕ್ಕೆ ಯಜಮಾನಿಕೆ ಬರಬಾರದು, 70ಕ್ಕೆ ಅದೇನೋ ಇರಬಾರದು ಎಂಬ ಗಾದೆಯಂತೆ ಅವನಿದ್ದಾನೆ. ಅವನು ಪಿಯುಸಿಗೆ ವಿದ್ಯಾಭ್ಯಾಸ ಮುಗಿಸಿದವನು. ಅಂತಹವನಿಗೆ ಶಿಕ್ಷಣ ಸಚಿವ ಸ್ಥಾನ ಹೇಗೇ ಕೊಟ್ಟರೋ ಎಂದರು.
Also read: ನೋಡ್ತಿರಿ, ಆ ದಿನಾಂಕಕ್ಕೆ ಮನೆ ಖಾಲಿ ಮಾಡ್ತಾರೆ | ಗೀತಾ ವಿರುದ್ಧ ಕುಮಾರ್ ಬಂಗಾರಪ್ಪ ವ್ಯಂಗ್ಯ
ಸಂಸದ ಬಿ.ವೈ. ರಾಘವೇಂದ್ರ #B Y Raghavendra ಅವರು ಸಂಸದರಾದ ಮೇಲೆ ಸಾಕಷ್ಟು ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಅವರ ಅಭಿವೃದ್ಧಿಯೇ ಅವರನ್ನು ಗೆಲ್ಲಿಸುತ್ತದೆ. ಇದು ರಾಷ್ಟ್ರದ ಪ್ರಶ್ನೆ, ಜಾತಿಗೆ ಮತವಲ್ಲ, ದೇಶಕ್ಕೆ ಮತ, ಮೋದಿಗೆ ಮತ, ಮೋದಿ #PM Modi ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ. ಮೇಘರಾಜ್, ಡಿ.ಎಸ್. ಅರುಣ್, ಗಿರೀಶ್ ಪಟೇಲ್, ಶಿವರಾಜ್, ಜ್ಯೋತಿಪ್ರಕಾಶ್, ಹರಿಕೃಷ್ಣ, ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post