ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧು ಬಂಗಾರಪ್ಪ #Madhu Bangarappa ಅವರೇ, ನೀವು ಐದು ಬಾರಿ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದರೆ, ನಿಮ್ಮಕ್ಕ ನಿಂತಾಗಲೆಲ್ಲಾ ಸೋತಿದ್ದಾರೆ ಎಂದು ಮಾಜಿ ಶಾಸಕ, ಬಿಜಪಿ ನಾಯಕ ಹರತಾಳು ಹಾಲಪ್ಪ #Harathalu Halappa ಲೇವಡಿ ಮಾಡಿದರು.
ಪೆಸಿಟ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಅಹಂಕಾರ, ದರ್ಪದಿಂದ ಮೆರೆಯುತ್ತಿದ್ದಾರೆ. ಜಿಲ್ಲೆಯ ಸಮಸ್ಯೆಯೇನು ಗೊತ್ತಾ? ಮಧು ಬಂಗಾರಪ್ಪ ಐದು ಬಾರಿ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದಾರೆ. ಆದರೆ, ನಿಮ್ಮಕ್ಕ ನಿಂತಾಗಲೆಲ್ಲಾ ಸೋತಿದ್ದಾರೆ ಎಂದು ಕಟಕಿಯಾಡಿದರು.
ರೈಲು ಬರುತ್ತವೆ ಹೋಗುತ್ತದೆ. ಬದಲಾವಣೆ ಆಗಿದೆ. ಹಿಂದೆ ಶುಚಿಯೇ ಇರಲಿಲ್ಲ. ಈಗ ರೈಲ್ವೆ, ಬಸ್, ವಿಮಾನ ನಿಲ್ದಾಣ ಸ್ವಚ್ಛತೆ ಕಂಡಿದೆ. ಸಾಕಷ್ಟು ಬದಲಾವಣೆ ಆಗಿದೆ ಎಂದರು.
Also read: ಮೋದಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಮಿಸ್ ಮಾಡ್ಕೋಬೇಡಿ | ಬಿ.ವೈ. ರಾಘವೇಂದ್ರ ಕರೆ
ಬಂಗಾರಪ್ಪ ನೋಡಿದ್ದೇವೆ. ಮಗನಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಎರಡನೇ ಬಾರಿ ಶಾಸಕ ಅಷ್ಟೇ. ಅವರ ಗತ್ತು, ಗೈರತ್ತು, ಗಮ್ಮತ್ತು ಹೇಳತೀರದು. ನಮ್ಮ ಅಭ್ಯರ್ಥಿ ಸರಳ ಅಭ್ಯರ್ಥಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























