ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊಳಗ, ಪಾವು, ಸೇರು, ಅಡಿಕೆ ಸುಲಿಯುವ ಕತ್ತಿ, ಮೆಟ್ಟುಗತ್ತಿ, ದರಗಿನ ಕೊಕ್ಕೆ, ನೊಳ್ಳಿ, ಹಲಸಿನ ಹಣ್ಣುಗಳು, ನೊಳ್ಳಿ, ಕೈ ಕೊಡಲಿ, ಗೆರ್ಸಿ, ಬಾಯಿ ಕೊಕ್ಕೆ, ಹಾಳೆ ಕೊಟ್ಟೆ, ದೇಸಿಯ ಸಾಮಾಗ್ರಿಗಳು, ಗೊಂಬೆಗಳು ಹೀಗೆ ಆಧುನಿಕತೆಯ ಭರಾಟೆಗೆ ಸಿಲುಕಿ ಕಣ್ಮರೆಯಾಗುತ್ತಿರುವ ಮಲೆನಾಡಿನ ಬೇಸಾಯದ ಉಪಕರಣಗಳು ಅಲ್ಲಿ ಅನಾವರಣಗೊಂಡಿತ್ತು.
ಅಂತಹ ಮಲೆನಾಡ ವೈಭವದ ಪರಂಪರೆ ಅನಾವರಣಗೊಂಡಿದ್ದು ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ Shivamogga JNNCE ಎಂಬಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಮಲೆನಾಡು ಮೇಳ – 2022, Malenadu Mela-2022 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಸಿಯ ಉಡುಗೆಯೊಂದಿಗೆ ಸಂಭ್ರಮಿಸಿದರು.
ರೂಪಾಂತರಗೊಳ್ಳುತ್ತಿರುವ ಮಲೆನಾಡನ್ನು ಉಳಿಸಿಕೊಳ್ಳಬೇಕಿದೆ :
ಮಲೆನಾಡಿನ ಬದುಕು ರೂಪಾಂತರಗೊಂಡಿದೆ ಅದರೇ ಸೊಗಡು ಹಾಗೆಯೇ ಉಳಿದಿದೆ. ರೂಪಾಂತರತೆ ಮೂಲಕ ಕಳೆದು ಹೋಗುತ್ತಿರುವ ಮೂಲ ಮಲೆನಾಡಿನ ಸೊಗಡನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

Also read: ಮುಖ್ಯ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿದ ಚಳ್ಳಕೆರೆ ತಹಶೀಲ್ದಾರ್ : ಸಾರ್ವಜನಿಕರ ಮೆಚ್ಚುಗೆ
ಕಾರ್ಯಕ್ರಮ ಉದ್ಘಾಟಿಸಿ ಖ್ಯಾತ ಉದ್ಯಮಿ ವಿಶ್ವನಾಥ ಕುಂಟುವಳ್ಳಿ ಮಾತನಾಡಿ, ಹಳ್ಳಿಗಳಲ್ಲಿಯೇ ಸಾಕಷ್ಟು ಅವಕಾಶಗಳು ದೊರೆಯುತ್ತಿರುವ ಈ ಹೊತ್ತಿನಲ್ಲಿ ಯುವ ಸಮೂಹ ಪಟ್ಟಣಗಳಿಂದ ಮಾತ್ರ ಭವಿಷ್ಯವೆಂಬ ಭ್ರಮೆಯಿಂದ ಹೊರಬಂದು ನಮ್ಮ ಊರುಗಳನ್ನು ಉನ್ನತಿಕರಣದತ್ತ ಕೊಂಡೊಯ್ಯುವಂತೆ ಶ್ರಮಿಸಬೇಕಿದೆ. ಹಳ್ಳಿಗಳಲ್ಲಿ ಲಭ್ಯವಿರುವ ದೇಶೀಯ ಸಂಪನ್ಮೂಲಗಳು ಸ್ವಾವಲಂಬಿಯಾಗಿ ಬದುಕು ನಡೆಸಲು ಪೂರಕ ವಾತಾವರಣ ನೀಡಲಿದ್ದು, ಗ್ರಾಮೀಣ ಕೈಗಾರಿಕೆಗಳ ಮೂಲಕ ಇರುವಲ್ಲಿಯೇ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮಿ ಎಂದು ಸಲಹೆ ನೀಡಿದರು.












Discussion about this post