ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿ ಇಂದು ಮತ್ತೆ ಹಲವು ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಹಳಷ್ಟು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಹೊಸಮನೆ ಬಡಾವಣೆಯಲ್ಲಿ ಮೂರು ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಮೂರು ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಪಿ-23614ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಯೋರ್ವರಿಗೆ ಸೋಂಕು ದೃಢಪಟ್ಟಿದ್ದು, ಹೊಸಮನೆ ಶಿವಶಂಕರ್ ಗ್ಯಾರೇಜ್ ರಸ್ತೆಯಲ್ಲಿಯೂ ಸಹ ವ್ಯಕ್ತಿಯೋರ್ವರಿಗೆ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸಮನೆಯ 6ನೆಯ ಮುಖ್ಯರಸ್ತೆ, 2ನೆಯ ಅಡ್ಡರಸ್ತೆ ಹಾಗೂ 6ನೆಯ ಅಡ್ಡರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಇನ್ನು, ಎಸ್’ಪಿಎಂ ರಸ್ತೆಯ 15 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು, ಈಗಾಗಲೇ ಸೋಂಕು ಪತ್ತೆಯಾಗಿದ್ದ ಆಕೆಯ ತಾಯಿಯಿಂದ ಸೋಂಕು ತಗುಲಿದೆ ಎಂದು ಹೇಳಲಾಗಿದೆ.
ಟಿಪ್ಪು ನಗರದ 18 ವರ್ಷದ ಮೆಕ್ಯಾನಿಕ್ ಒಬ್ಬನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 5ನೆಯ ಕ್ರಾಸನ್ನು ಸೀಲ್ ಡೌನ್ ಮಾಡಲಾಗುತ್ತಿದೆ.
ಇನ್ನು, ಜೆಪಿ ನಗರದ 3ನೆಯ ತಿರುವಿನ 47 ವರ್ಷದ ಮಹಿಳೆ, ಗಾಂಧೀ ಬಜಾರ್’ನ ಕಸ್ತೂರಬಾ ರಸ್ತೆಯ 42 ವರ್ಷದ ಪುರುಷ, ಶಂಕರ ಮಠ ರಸ್ತೆಯ ಬ್ಯಾಂಕ್ ಸಿಬ್ಬಂದಿಯಾಗಿರುವ 35 ವರ್ಷದ ಪುರುಷ, ಸವಾರ್’ಲೈನ್ ರಸ್ತೆಯ 26 ವರ್ಷದ ಪುರುಷ, ಮಲ್ಲೇಶ್ವರಂ ನಗರದ ರಾಮ್ ರಾವ್ ಬಡಾವಣೆಯ 50 ವರ್ಷದ ಪುರುಷ, ಜ್ಯೋತಿ ನಗರದ 1ನೆಯ ತಿರುವು, ಸೋಮಿನಕೊಪ್ಪದ ಆರಾಧ್ಯ ಲೇಔಟ್’ನ 53 ವರ್ಷದ ಪುರುಷ, ವಿನೋಬ ನಗರ 1ನೆಯ ಹಂತದ 25 ವರ್ಷದ ಯುವಕ, ವೆಂಕಟೇಶ್ ನಗರದ 2ನೆಯ ಅಡ್ಡರಸ್ತೆಯ 44 ವರ್ಷದ ಪುರುಷ, ಪುರಲೆಯ 38 ವರ್ಷದ ಪುರುಷ, ಬೈಪಾಸ್ ರಸ್ತೆ ನಂದನ ಶಾಲೆ ಬಳಿಯ 38 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
Get In Touch With Us info@kalpa.news Whatsapp: 9481252093















