ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಲಕ್ಷ್ಮಿಪುರದಿಂದ ಶ್ರೀರಾಂಪುರಕ್ಕೆ ಹೋಗುವ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಆರೋಪದಲ್ಲಿ ನಗರದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಟಿಪ್ಪನಗರ ನಿಆಸಿ ಶಾಹಿದ್ ಖಾನ್(37) ಹಾಗೂ ಸೂಳೆಬೈಲು ನಿವಾಸಿ ಮಹಮ್ಮದ್ ಜಾಫರ್ ಸಾಧಿಕ್ ಎಂದು ಗುರುತಿಸಲಾಗಿದೆ.

ಲಕ್ಷ್ಮಿಪುರದಿಂದ ಶ್ರೀರಾಂಪುರಕ್ಕೆ ಹೋಗುವ ರಿಂಗ್ ರಸ್ತೆಯಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿರುವ ಕುರಿತಾಗಿ ತುಂಗಾ ನಗರ ಪೊಲೀಸರಿಗೆ ಖಚಿತ ಮಾಹಿತಿ ಬಂದಿರುತ್ತದೆ.
ಇದನ್ನು ಆಧರಿಸಿ, ಎಸ್’ಪಿ ಮಿಥುನ್ ಕುಮಾರ್, ಎಎಸ್’ಪಿ 1 ಎ.ಜಿ. ಕಾರಿಯಪ್ಪ, ಎಎಸ್’ಪಿ 2 ರಮೇಶ್ ಕುಮಾರ್ ಅವರುಗಳು ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಬಾಬು ಅಂಜನಪ್ಪ ಮೇಲ್ವಿಚಾರಣೆಯಲ್ಲಿ, ತುಂಗಾ ನಗರ ಪೊಲೀಸ್ ಠಾಣೆ ಅಧಿಕಾರಿ ಕೆ.ಟಿ. ಗುರುರಾಜ್, ತುಂಗಾನಗರ ಪಿಎಸ್’ಐ ಎಂ. ರಘುವೀರ್, ಎಎಸ್’ಐ ಚಂದ್ರಾನಾಯ್ಕ, ಸಿಎಚ್’ಸಿ ಅರುಣ್ ಕುಮಾರ್, ಸಿಎಚ್’ಸಿ ಕಿರಣ್ ಮೋರೆ, ಸಿಪಿಸಿ ಸಂತೋಷ್, ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಸಿಪಿಸಿ ಲೋಕೇಶ್.ಎಸ್.ಆರ್, ಸಿಪಿಸಿ ರಂಗನಾಥ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತರಿಂದ 1 ಕೆಜಿ 420 ಗ್ರಾಂ ಗಾಂಜಾ, 24 ಗ್ರಾಂ ಡ್ರಗ್ಸ್ ಮತ್ತು ಸ್ಕಾರ್ಪಿಯೋ ಕಾರನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post