ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಸ್ಟೈಲ್ ಡ್ಯಾನ್ಸ್ ಕ್ರೀವ್ ಸ್ಟುಡಿಯೋ ನೃತ್ಯ ಸಂಸ್ಥೆಯಿಂದ `ಮಾರಿ ಜಾತ್ರೆ ಆಲ್ಬಂ ಗೀತೆ’ #Mari Jatre Album Song ಎಂಬ ಶೀರ್ಷಿಕೆಯಲ್ಲಿ ನಿರ್ಮಿಸಲಾಗಿರುವ ಸ್ಟೈಲ್ ಡ್ಯಾನ್ಸ್ ಕ್ರೀವ್ ಶಿವಮೊಗ್ಗ #Style Dance Crew Shivamogga ಯೂಟ್ಯೂಬ್ ಚಾನಲ್‍ನಲ್ಲಿ ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ ಎಂದು ಸ್ಟೈಲ್ ಡ್ಯಾನ್ಸ್ ಕ್ರೀವ್ ಸ್ಟುಡಿಯೋ ಸಂಸ್ಥಾಪಕ ಶಶಿಕುಮಾರ್ ಎನ್. ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 600 ವರ್ಷಗಳ ಇತಿಹಾಸವುಳ್ಳ ಶಿವಮೊಗ್ಗದ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕಾಗಿ ಈ ಆಲ್ಬಂ ಗೀತೆಯನ್ನು ನಿರ್ಮಿಸಲಾಗಿದೆ ಎಂದರು.
ಮಾರಿಕಾಂಬಾ ದೇವಿಯ ಜಾತ್ರೆಯು ವಿಜೃಂಭಣೆಯಿಂದ ನಡೆಸುವ ಸಲುವಾಗಿ ಹಾಗೂ ಶಿವಮೊಗ್ಗದ ಜನತೆಗೆ ಈ ಆಲ್ಬಂ ಗೀತೆಯನ್ನು ಅರ್ಪಿಸಲಾಗುತ್ತಿದೆ. ಈಗಾಗಲೇ 80 ಸಾವಿರಕ್ಕೂ ಹೆಚ್ಚು ಜನರು ಈ ಗೀತೆಯನ್ನು ವೀಕ್ಷಿಸಿದ್ದು, ಈ ಆಲ್ಬಂ ಗೀತೆ 3.5 ನಿಮಿಷದ್ದಾಗಿದೆ ಎಂದರು.
ಈ ಗೀತೆಗೆ ಮೈಸೂರಿನ ಪ್ರಿನ್ಸ್ ಜೋಸೆಫ್ ಸಂಗೀತ ನೀಡಿದ್ದು, ಸಾಹಿತ್ಯ ಮತ್ತು ಗಾಯನ ನನ್ನದ್ದಾಗಿದೆ. ಜಿ.ಎಸ್.ಡ್ರೋನ್ ಗಣೇಶ್ ಛಾಯಾಗ್ರಹಣ ಮಾಡಿದ್ದು, ಪಿಕ್ಚರ್ ಪೋಯೇಟ್ ಸುನೀಲ್ ಸಂಕಲನವಿದೆ. ಪೋಸ್ಟರ್ ಡಿಸೈನ್ ಸುಜನ್ ಮತ್ತು ಮದನ್ ಜಿ. ಹೊಸಮನೆ ಅವರದ್ದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಎಸ್. ಡ್ರೋನ್ ಗಣೇಶ್, ಸುನಿಲ್, ಮದನ್ ಜಿ., ಗೌತಮ್ ಎಸ್.ಆರ್. ರಘು ಗುಂಡ್ಲು ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















