ನಗರದ ಅಂಬೇಡ್ಕರ್ ಭವನದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‍ಟೌನ್ ಹಾಗೂ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಮಹಿಳಾ ಉದ್ಯಮಿಗಳಿಂದ ಆಯೋಜಿಸಿದ್ದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಹಿಳಾ ಉದ್ಯಮಿ ಉಷಾ ಚಾಲನೆ ನೀಡಿ ಶುಭ ಹಾರೈಸಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನಾಡಿಗೆ ನಾರಿಯ ನಡಿಗೆ” ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ನಿರ್ಮಿಸಿದ್ದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಾರ್ವಜನಿಕರ ಗಮನ ಸೆಳೆಯಿತು. ಅತ್ಯಾಕರ್ಷಕ ಸೀರೆಗಳ ಪ್ರದರ್ಶನ, ಸೌಂದರ್ಯ ಅಲಂಕಾರಿಕ ವಸ್ತುಗಳು, ವಿವಿಧ ಕರಕುಶಲ ಉತ್ಪನ್ನಗಳು, ಬಟ್ಟೆ ಬ್ಯಾಗ್ ಮಾರಾಟ, ಮನೆಯಲ್ಲಿ ಆಕರ್ಷಣೆಗೆ ಇಡುವ ಅಲಂಕಾರಿಕ ವಸ್ತುಗಳ ಸಂಗ್ರಹ, ತಿಂಡಿ ತಿನಿಸುವ ಉತ್ಪನ್ನಗಳ ಮೇಳ ಹೀಗೆ ಎಲ್ಲವೂ ಸುಂದರವಾಗಿ ವ್ಯವಸ್ಥೆ ಮಾಡಲಾಗಿತ್ತು.
ಸಮನ್ವಯ ಕಾಶಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷವಾಗಿ “ನಾಡಿಗೆ ನಾರಿಯ ನಡಿಗೆ” ಹೆಸರಿನಲ್ಲಿ 2 ಕಿಮೀ. ನಡಿಗೆ ಹಮ್ಮಿಕೊಳ್ಳಲಾಗಿದೆ .ಸಾವಿರಾರು ಮಹಿಳೆಯರು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಿಸುವ ದಿಸೆಯಲ್ಲಿ ಮಾರುಕಟ್ಟೆ ಮೇಳ ಸಹಕಾರಿಯಾಗಲಿದೆ ಎಂದು ತಿಳಿಸಿದರು. ರೋಟರಿ ಕ್ಲಬ್ ಶಿವಮೊಗ್ಗ ಮಿಡ್‍ಟೌನ್ ಆನ್ಸ್ ಕ್ಲಬ್ ಅಧ್ಯಕ್ಷೆ ನಿರಂಜನಿ ರವೀಂದ್ರ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾರೋಣ, ಎಲ್ಲರೂ ಒಂದಾಗಿ ನಡೆಯೋಣ, ಕನ್ನಡಾಂಬೆಗೆ ಜೈಕಾರ ಹಾಕೋಣ ಎಂಬ ಘೋಷಣೆಯೊಂದಿಗೆ ನಾಡಿಗೆ ನಾರಿಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ವಿಭಿನ್ನ ಕಾರ್ಯಕ್ರಮ ನಗರದಲ್ಲಿ ನಡೆಯುತ್ತಿದೆ ಎಂದರು.
ಮಹಿಳೆಯರ ಅತ್ಯಾಕರ್ಷಕ ಒಡವೆ, ಸೀರೆ ಪ್ರದರ್ಶನ, ಮನೋರಂಜನೆ ಚಟುವಟಿಕೆಗಳು, ರುಚಿಕರ ತಿಂಡಿ ತಿನಿಸು ಮಳಿಗೆ, ಫೋಟೋ ಬೂತ್ ಮುಂತಾದ ಆಕರ್ಷಣೆಗಳು ಕಾರ್ಯಕ್ರಮದಲ್ಲಿ ಇದ್ದವು. ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ರೋಟರಿ ಸಹಾಯಕಗವರ್ನರ್‍ರಾಜೇಂದ್ರ ಪ್ರಸಾದ್, ರೋಟರಿ ಮಿಡ್‍ಟೌನ್ ಅಧ್ಯಕ್ಷ ರವೀಂದ್ರಕುಮಾರ್, ಕಾರ್ಯದರ್ಶಿ ರವೀಂದ್ರ ಬೆಣ್ಣೆಹಳ್ಳಿ, ಆನ್ಸ್‍ಕ್ಲಬ್ ಕಾರ್ಯದರ್ಶಿ ಗಿರಿಜಾರವೀಂದ್ರ, ಶ್ವೇತಾ, ಸಮನ್ವಯದ ಸ್ವಯಂ ಸೇವಕರು, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Discussion about this post