No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Monday, May 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಮಲಿನ ನೀರು ತುಂಗಾ ನದಿಗೆ ಸೇರದಂತೆ ತಡೆಗಟ್ಟಲು ಕ್ರಮ: ಚಿದಾನಂದ ಎಸ್. ವಟಾರೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 28, 2022
in ಶಿವಮೊಗ್ಗ
0
ಮಲಿನ ನೀರು ತುಂಗಾ ನದಿಗೆ ಸೇರದಂತೆ ತಡೆಗಟ್ಟಲು ಕ್ರಮ: ಚಿದಾನಂದ ಎಸ್. ವಟಾರೆ

Representational Image

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಸ್ಮಾರ್ಟ್‍ಸಿಟಿ ವತಿಯಿಂದ ತುಂಗಾ ನದಿಗೆ ಮಲಿನ ನೀರು ಸೇರದಂತೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಶಿವಮೊಗ್ಗ ಸ್ಮಾರ್ಟ್‍ಸಿಟಿ ಲಿ. ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್. ವಟಾರೆ ಕೆಳಕಂಡಂತೆ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ಮಲಿನ ನೀರು, ರಾಜಕಾಲುವೆಗಳ ಮೂಲಕ ಸುಮಾರು 16 ಜಾಗಗಳಲ್ಲಿ ತುಂಗಾ ನದಿಗೆ ಸೇರುತ್ತಿದ್ದು, ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿರುವ 7 ಜಾಗಗಳಲ್ಲಿ ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 9 ಜಾಗಗಳಲ್ಲಿ ಮಲಿನ ನೀರು ಸೇರ್ಪಡೆಯನ್ನು ತಡೆಗಟ್ಟಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಅಭಿಯಾನದ ಅನ್ವಯ ನಗರದ ಬೈಪಾಸ್ ಹೊಸ ಸೇತುವೆಯಿಂದ ಬೆಕ್ಕಿನ ಕಲ್ಮಠ ಹಳೆ ಸೇತುವೆಯವರೆಗೆ ತುಂಗಾ ನದಿಯ ಉತ್ತರ ದಂಡೆಯ 2.7 ಕಿ.ಮೀ. ಉದ್ದಕ್ಕೆ ಮಾಡಲಾಗುತ್ತಿರುವ ನದಿ ದಂಡೆ ಅಭಿವೃದ್ಧಿ ಯೋಜನೆಯಲ್ಲಿ ಪೂರಕವಾಗಿ ಇಮಾಂಬಾಡಾ, ಲಾಲ್ ಬಂದ್ ಕೇರಿ, ರಾಮಣ್ಣ ಶ್ರೇಷ್ಟಿ, ಪಾರ್ಕ್ ಹತ್ತಿರ, ಕೊಲ್ಲೂರಯ್ಯನ ಬೀದಿ, ಭೀಮೇಶ್ವರ ದೇವಸ್ಥಾನ, ಹಿಂದುಳಿದ ವರ್ಗಗಳ ವಸತಿ ನಿಲಯ ಮತ್ತು ಬೆಕ್ಕಿನ ಕಲ್ಮಠದ ಹತ್ತಿರ ಹೀಗೆ ಒಟ್ಟು 7 ಸ್ಥಳಗಳಲ್ಲಿ ಕಲುಷಿತ ನೀರು ನದಿಗೆ ಸೇರದಂತೆ ತಡೆಯುವ ಪ್ರತಿಬಂಧಕ ಮತ್ತು ವಿಚಲನ (Interception & diversion) ವಿಧಾನವನ್ನು ಅಳವಡಿಸಿಕೊಂಡು ರೂ.2.63 ಕೋಟಿ ಹೆಚ್ಚುವರಿ ಅಂದಾಜು ವೆಚ್ಚದಲ್ಲಿ ಗುರುತ್ವಾಕರ್ಷಣಾ ಹರಿವು (gravity flow) ಹಾಗೂ ಪಂಪಿಂಗ್ ಮೂಲಕ ಕಲುಷಿತ ನೀರನ್ನು ಒಳಚರಂಡಿ ಕೊಳವೆಗೆ/ವೆಟ್ ವೆಲ್‍ಗಳಿಗೆ ಹರಿಸಿ, ತುಂಗಾ ನದಿಗೆ ಸೇರದಂತೆ ತಡೆಯುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ಮಳೆಗಾಲದ ಮುನ್ನ ಪೂರ್ಣಗೊಳ್ಳುತ್ತವೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಮಲಿನ ನೀರು ನೇರವಾಗಿ ತುಂಗಾನದಿಗೆ ಸೇರ್ಪಡೆಯಾಗುವುದು ತಪ್ಪುತ್ತದೆ.

ಜೊತೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ ತೆಗೆದುಕೊಳ್ಳಲಾದ ಏಳು ಸ್ಮಾರ್ಟ್ ರಸ್ತೆ ಅಭಿವೃದ್ಧಿ ಮತ್ತು ಐದು ಕನ್ಸರ್ವೆನ್ಸಿಗಳ ಅಭಿವೃದ್ಧಿ ಯೋಜನೆಗಳಲ್ಲಿ ಅಸ್ತಿತ್ವದಲ್ಲಿರುವ ಸುಮಾರು 16,293 ಮೀಟರ್ ಉದ್ದದ ಒಳಚರಂಡಿ ದುರಸ್ತಿಗೊಳಿಸಲಾಗಿದ್ದು, ಒಳಚರಂಡಿ ಮಾರ್ಗಗಳನ್ನು ಮ್ಯಾನ್ ಹೋಲ್‍ಗೆ ಸಂಪರ್ಕ ಮಾಡದೇ ಇರುವ ಹಲವು ಮನೆಗಳು, ವಾಣಿಜ್ಯ ಸಂಕೀರ್ಣ ಇತ್ಯಾದಿಗಳಿಂದ ಬರುವ ಕಲುಷಿತ ನೀರು ಹರಿಯಲು ಒಳಚರಂಡಿ ಕೊಳವೆ/ವೆಟ್‍ವೆಲ್‍ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದು ಸಹಾ ತುಂಗಾ ನದಿಗೆ ಕಲುಷಿತ ತ್ಯಾಜ್ಯ ನೀರು ಸೇರಿದಂತೆ ತಡೆಯುವ ಪೂರಕ ವ್ಯವಸ್ಥೆಯಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಶಿವಮೊಗ್ಗ ವಿಭಾಗದ ವತಿಯಿಂದ ಹಸಿರು ನ್ಯಾಯ ಮಂಡಳಿಯ ನಿರ್ದೇಶನದಂತೆ ರಾಜಕಾಲುವ ಮೂಲಕ ಮಲಿನ ನೀರು ತುಂಗಾ ನದಿ ಸೇರುತ್ತಿರುವುದನ್ನು ತಡೆಗಟ್ಟಲು ತ್ಯಾವರೆಚೆಟ್ನಹಳ್ಳಿ ಎಸ್.ಟಿ.ಪಿ. ಹತ್ತಿರ, ಗುಂಡಪ್ಪ ಶೆಡ್ ನೆಟ್ವೆಲ್ ಹತ್ತಿರ, ಗುರುಪುರ ವೆಟ್‍ವೆಲ್ ಹತ್ತಿರ, ವಿದ್ಯಾನಗರ ಕಂಟ್ರಿಕ್ಲಬ್ ಪಕ್ಕ, ವಿದ್ಯಾನಗರ ಕೊಳಚೆ ನಿರ್ಮೂಲನಾ ಮಂಡಳಿ ಪಕ್ಕ, ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ ಬಳಿ, ಸವಾಯಿ ಪಾಳ್ಯ, ತೀರ್ಥಹಳ್ಳಿ ರಸ್ತೆಯ ನ್ಯೂ ಮಂಡ್ಲಿ ಬಳಿ ಹಾಗೂ ವಾದಿ-ಎ-ಹುದಾ ಬೈಪಾಸ್ ರಸ್ತೆ ಬಳಿ ಹೀಗೆ ಬಾಕಿ 9 ಸ್ಥಳಗಳಲ್ಲಿ ಪ್ರತಿಬಂಧಕ ಮತ್ತು ವಿಚಲನ (Interception & diversion)ವಿಧಾನದಲ್ಲಿ ರೂ.15.15 ಕೋಟಿ ಅಂದಾಜಿನಲ್ಲಿ ಯೋಜನೆ ರೂಪಿಸಿ ಈಗಾಗಲೇ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ಪಡೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಈ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ತುಂಗಾ ನದಿಗೆ ರಾಜ ಕಾಲುವೆಗಳಿಂದ ಸೇರ್ಪಡೆಯಾಗುತ್ತಿರುವ ಮಲಿನ ನೀರನ್ನು ಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತದೆ. ಮಾಂಸ ತ್ಯಾಜ್ಯ ಹಾಗೂ ಇತರೆ ಘನತ್ಯಾಜ್ಯಗಳನ್ನು ನೇರವಾಗಿ ನದಿಗೆ ಎಸೆಯುವುದನ್ನು ನಿಬರ್ಂಧಿಸಲು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದಾಗ್ಯೂ ನದಿದಂಡೆಯ ವಿಸ್ತಾರವನ್ನು ಪರಿಗಣಿಸಿದಲ್ಲಿ, ಕೇವಲ ತಾಂತ್ರಿಕ ಮತ್ತು ಕಾನೂನಾತ್ಮಕ ಪ್ರತಿಬಂಧಕಗಳಿಂದ ಮಾತ್ರ ಇಂತಹ ಚಟವಟಿಕೆಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ, ಸಾರ್ವಜನಿಕರು ಸಹಾ ನದಿಯ ಸ್ವಚ್ಛತೆಯ ಬಗ್ಗೆ ಆಸಕ್ತಿವಹಿಸಿ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಕೈಜೋಡಿಸಿ, ತುಂಗಾ ನದಿಯ ಪವಿತ್ರತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುವಂತೆ ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ:
Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga Newsshivamogga smart cityಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಶಿವಮೊಗ್ಗ_ನ್ಯೂಸ್
Share197Tweet123Send
Previous Post

ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ

Next Post

ಭದ್ರಾವತಿ ಮಾಜಿ ಸೈನಿಕರ ಸಂಘದಿಂದ 73ನೇ ಗಣರಾಜ್ಯೋತ್ಸವ ಆಚರಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ ಮಾಜಿ ಸೈನಿಕರ ಸಂಘದಿಂದ 73ನೇ ಗಣರಾಜ್ಯೋತ್ಸವ ಆಚರಣೆ

ಭದ್ರಾವತಿ ಮಾಜಿ ಸೈನಿಕರ ಸಂಘದಿಂದ 73ನೇ ಗಣರಾಜ್ಯೋತ್ಸವ ಆಚರಣೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026

ಪ್ರಧಾನಿ ಮೋದಿಯ ಒಂದೇ ಒಂದು ಮಾತು | ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ

May 11, 2026
ಶಿವಮೊಗ್ಗ | ಬಸ್‌-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

ಶಿವಮೊಗ್ಗ | ಬಸ್‌-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

May 11, 2026
ಆಂಧ್ರ ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಪ್ರಧಾನಿ ಮೋದಿ ಭೇಟಿ | ಕಾರಣವೇನು?

ಆಂಧ್ರ ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಪ್ರಧಾನಿ ಮೋದಿ ಭೇಟಿ | ಕಾರಣವೇನು?

May 10, 2026
ನೈಋತ್ಯ ರೈಲ್ವೆ ಮೈಸೂರು ವಿಭಾಗ ಪ್ರಶಸ್ತಿ | ಚಿಕ್ಕಜಾಜೂರು ನಿಲ್ದಾಣ ಬೆಸ್ಟ್ | ಶಿವಮೊಗ್ಗ ರೈಲ್ವೆ ಕಾಲೋನಿ ಅತ್ಯುತ್ತಮ

ನೈಋತ್ಯ ರೈಲ್ವೆ ಮೈಸೂರು ವಿಭಾಗ ಪ್ರಶಸ್ತಿ | ಚಿಕ್ಕಜಾಜೂರು ನಿಲ್ದಾಣ ಬೆಸ್ಟ್ | ಶಿವಮೊಗ್ಗ ರೈಲ್ವೆ ಕಾಲೋನಿ ಅತ್ಯುತ್ತಮ

May 10, 2026
ಮೊದಲ ದಿನವೇ ಡಿಎಂಕೆಗೆ ಸಿಎಂ ವಿಜಯ್ ಶಾಕ್ | ಹಿಂದಿನ ಅವಧಿಯ ಶ್ವೇತ ಪತ್ರ ಹೊರಡಿಸುತ್ತೇನೆ!

ಮೊದಲ ದಿನವೇ ಡಿಎಂಕೆಗೆ ಸಿಎಂ ವಿಜಯ್ ಶಾಕ್ | ಹಿಂದಿನ ಅವಧಿಯ ಶ್ವೇತ ಪತ್ರ ಹೊರಡಿಸುತ್ತೇನೆ!

May 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL