ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ಮಾಜಿ ಸೈನಿಕರ ಸಂಘದ ವತಿಯಿಂದ 73ನೇ ಗಣರಾಜ್ಯೋತ್ಸವ ಆಚರಣೆಯನ್ನು ವಿಶೇಷವಾಗಿ ಅಂಧ ಮಕ್ಕಳ ಜೊತೆ ಆಚರಿಸಿತು.
ಭದ್ರಾವತಿಯ ನ್ಯೂಟನ್ ಭಾಗದಲ್ಲಿರುವ ಸಿದ್ದಾರ್ಥ ಅಂದರ ಮಕ್ಕಳ ಶಾಲೆಯಲ್ಲಿ ಮಕ್ಕಳ ಜೊತೆ ನಡೆದ ಸಮಾರಂಭದಲ್ಲಿ ಸಂಘದ ವಾರ್ಷಿಕ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಜೆಸಿಐ ಭಾವನಾದ ಪದಾದಿಕಾರಿಗಳು ಹಾಗೂ ಚುಂಚಾದ್ರಿ ಮಹಿಳಾ ಸಹಕಾರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸೈನಿಕರ ಸಂಘದ ಕೆಲಸ ಕಾರ್ಯಗಳ ಶಿಸ್ತು, ಶ್ರದ್ದೆಗೆ ಗೌರವ ವ್ಯಕ್ತಪಡಿಸಿದರು.

ಅಂಧ ಮಕ್ಕಳ ಹಾಗೂ ವಿದ್ಯಾರ್ಥಿಗಳು ದೇಶ ಕಟ್ಟಿಡುವ ಗಾನ ಸುಧೆ ಹರಿಸಿದರು. ಸೈನಿಕ ಸಂಘದ ಪದಾದಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















